ಲೀಸೆಸ್ಟರ್: ಟೀಂ ಇಂಡಿಯಾ ಮತ್ತು ಲೀಸೆಸ್ಟರ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್ ತಂಡದ ಪರ ಬ್ಯಾಟಿಂಗ್ ಮಾಡುತ್ತಿರುವ ಭಾರತೀಯ ಬ್ಯಾಟಿಗ ಚೇತೇಶ್ವರ ಪೂಜಾರ ಅಭ್ಯಾಸ ಪಂದ್ಯದಲ್ಲೇ ಕಳಪೆ ಫಾರ್ಮ್ ಪುನರಾವರ್ತಿಸಿದ್ದಾರೆ.
ಈ ಮೊದಲೂ ಪೂಜಾರ ಕಳಪೆ ಫಾರ್ಮ್ ನಿಂದ ಸಾಕಷ್ಟು ಟೀಕೆಗೊಳಗಾಗಿದ್ದರು. ಹಾಗಿದ್ದರೂ ಕೌಂಟಿ ಕ್ರಿಕೆಟ್ ನ ಪ್ರದರ್ಶನ ಆಧರಿಸಿ ಅವರಿಗೆ ಇಂಗ್ಲೆಂಡ್ ಸರಣಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಅಭ್ಯಾಸ ಪಂದ್ಯದಲ್ಲೇ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದ್ದಾರೆ.
ಎರಡನೇ ದಿನವಾದ ಇಂದು ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲೀಸೆಸ್ಟರ್ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ. ಇದೀಗ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ 12 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.