Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಾಂಪಿಯನ್ಸ್ ಟ್ರೋಫಿ: ಅತಿಥೇಯರಿಗೆ ಶಾಕ್ ಕೊಟ್ಟ ಪಾಕ್

ಚಾಂಪಿಯನ್ಸ್ ಟ್ರೋಫಿ: ಅತಿಥೇಯರಿಗೆ ಶಾಕ್ ಕೊಟ್ಟ ಪಾಕ್
London , ಗುರುವಾರ, 15 ಜೂನ್ 2017 (08:30 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮೊದಲು ಪಾಕಿಸ್ತಾನ ಸೆಮಿಫೈನಲ್ ಗೇರುವುದೂ ಡೌಟು ಎನ್ನುವಷ್ಟು ಪೇಲವವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಎದ್ದ ತಂಡ ಸೆಮಿಫೈನಲ್ ನಲ್ಲಿ ಅತಿಥೇಯ ಇಂಗ್ಲೆಂಡ್ ಗೇ 8 ವಿಕೆಟ್ ಗಳ ಸೋಲುಣಿಸಿ ಫೈನಲ್ ಗೇರಿದೆ.

 
ಒಂದು ವೇಳೆ ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ಗೆದ್ದರೆ ಭಾರತ ಮತ್ತು ಪಾಕಿಸ್ತಾನ ಕದನಕ್ಕೆ ಭಾನುವಾರ ಸಾಕ್ಷಿಯಾಗಲಿದೆ. ನಿನ್ನೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಕೇವಲ 211 ರನ್ ಗಳಿಸಲಷ್ಟೇ ಶಕ್ತವಾಯಿತು. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಎಲ್ಲಿಯೂ ಪ್ರತಿರೋಧ ತೋರಲೇ ಇಲ್ಲ.

ಇಷ್ಟು ಕಡಿಮೆ ಮೊತ್ತ ನೋಡಿಯೇ ಪಾಕ್ ಬ್ಯಾಟ್ಸ್ ಮನ್ ಗಳ ಆತ್ಮವಿಶ್ವಾಸ ಹೆಚ್ಚಿರಬೇಕು. ಮೊದಲ ಎಸೆತವನ್ನೇ ಇಂಗ್ಲೆಂಡ್ ವೈಡ್ ನೊಂದಿಗೆ ಆರಂಭಿಸಿತು. ಜತೆಗೆ ಬೌಂಡರಿಗಳು ಸರಾಗವಾಗಿ ಬಂತು. ಹೀಗಾಗಿ ಪಾಕಿಸ್ತಾನ 37 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಜತೆಗೆ ಜಾಗತಿಕ ಕ್ರಿಕೆಟ್ ನಲ್ಲಿ ಮೂಲೆಗುಂಪಾಗಿದ್ದ ತನ್ನ ಹೆಸರನ್ನು ಮತ್ತೆ ಹಿಡಿದೆತ್ತಿತು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿರೀಕ್ಷಿತವಾಗಿ ಶಾಕ್ ಕೊಡುವ ಬಾಂಗ್ಲಾದೇಶ ಟೀಂ ಇಂಡಿಯಾಕ್ಕೆ ಸವಾಲಾಗಬಹುದೇ?