ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ. ಇಂದು ಮುಂಬೈಯಲ್ಲಿ ಸಭೆ ಸೇರಲಿರುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರು ಕೋಚ್ ಅಭ್ಯರ್ಥಿಗಳ ಸಂದರ್ಶನ ನಡೆಸುವುದು ಡೌಟು ಎಂಬ ಸುದ್ದಿ ಬಂದಿದೆ.
ಕಳೆದ ವರ್ಷದಂತೆ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸುವ ಪರಿಪಾಠವನ್ನು ಈ ಬಾರಿ ಕೈ ಬಿಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಕಳೆದ ವರ್ಷ ರವಿ ಶಾಸ್ತ್ರಿಯನ್ನು ಸಂದರ್ಶಿಸುವಾಗ ಗಂಗೂಲಿ ಉಪಸ್ಥಿತರಿರಲಿಲ್ಲ ಎಂದು ದೊಡ್ಡ ವಿವಾದವಾಗಿತ್ತು. ಕೊನೆಗೆ ಇವರಿಬ್ಬರೂ ದಿಗ್ಗಜರು ಸಾರ್ವಜನಿಕವಾಗಿ ಕಿತ್ತಾಡಿಕೊಂಡಿದ್ದರು. ಇದೇ ಕಾರಣಕ್ಕೆ ಈ ವರ್ಷ ಆ ಪದ್ಧತಿಯನ್ನು ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂವರು ಕ್ರಿಕೆಟ್ ದಿಗ್ಗಜರು ಪರಸ್ಪರ ಚರ್ಚಿಸಿ ಕೋಚ್ ಆಯ್ಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಹಾಗಿದ್ದರೂ ಅಂತಿಮ ತೀರ್ಮಾನ ಕ್ರಿಕೆಟ್ ಸಲಹಾ ಸಮಿತಿಯದ್ದಾಗಿರುತ್ತದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಮೂಲಗಳ ಪ್ರಕಾರ ರವಿಶಾಸ್ತ್ರಿ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ