ಬೆಂಗಳೂರು(ಮಾ.10): ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಬಲಗಾಲಿನ ಪಾದಕ್ಕೆ ಗಾಯ ಮಾಡಿಕೊಂಡಿರುವ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಸ್ಟಾರ್ಕ್ ತವರಿಗೆ ವಾಪಾಸಾಗಿ ಚಿಕಿತ್ಸೆ ಪಡೆಯಲಿದ್ದಾರೆ.
`ಬೆಂಗಳೂರು ಟೆಸ್ಟ್ ಪಂದ್ಯದ ವೇಳೆಯೇ ಮಿಷೆಲ್ ತಮ್ಮ ಬಲಗಾಲಿನ ಪಾದದಲ್ಲಿ ನೋವು ಕಾಣಿಸಿಕೊಂಡ ಬಗ್ಗೆ ತಿಳಿಸಿದ್ದರು. ಎರಡ್ಮೂರು ದಿನದ ಬಳಿಕವೂ ನೋವು ಕಡಿಮೆ ಆಗಲಿಲ್ಲ. ಹೀಗಾಗಿ, ಬೆಳಗ್ಗೆ ಬೆಂಗಳೂರಿನಲ್ಲಿ ಕಾಲನ್ನ ಸ್ಕ್ಯಾನ್ ಮಾಡಿಸಿದಾಗ ಸ್ಟ್ರೆಸ್ ಫ್ಯಾಕ್ಚರ್ ಬೆಳಕಿಗೆ ಬಂದಿದೆ’ ಎಂದು ಆಸ್ಟ್ರೇಲಿಯಾ ಫಿಸಿಯೋ ಡೇವಿಡ್ ಬೀಕೆ ಹೇಳಿದ್ದಾರೆ.
ಪುಣೆಯ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಸ್ಟಾರ್ಕ್ ಒಂದೇ ಓವರಿನಲ್ಲಿ ಕೊಹ್ಲಿ ಮತ್ತು ಮುರಳಿ ವಿಜಯ್ ವಿಕೆಟ್ ಉರುಳಿಸಿದ್ದರು.
ಮಷೆಲ್ ಮಾರ್ಷ್ ಸಹ ಭುಜದ ಗಾಯದಿಂದ ಸರಣಿಯಿಂದ ಹೊರಗುಳಿದಿದ್ದು, ಸ್ಟಾರ್ಕ್ ಸಹ ಗಾಯಾಳು ಪಟ್ಟಿ ಸೇರಿರುವುದು ಆಸ್ಟ್ರೇಲಿಯಾ ತಂಡಕ್ಕೆ ನುಂಗಲಾರದ ತುತ್ತಾಗಿದೆ.