ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವೇ ಟೀಂ ಇಂಡಿಯಾ ಪಾಲಾಗಿದೆ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 28 ರನ್ ಗಳ ಗೆಲುವು ಸಾಧಿಸಿದೆ.
ಆದರೆ ಈ ಪಂದ್ಯದಲ್ಲಿ ಭಾರತ ನೀಡಿದ 203 ರನ್ ಗಳ ಬೃಹತ್ ಮೊತ್ತವನ್ನು ಆಫ್ರಿಕಾ ಯಶಸ್ವಿಯಾಗಿ ಬೆನ್ನಟ್ಟುವ ಭೀತಿ ಭಾರತಕ್ಕೆ ಎದುರಾಗಿತ್ತು. ಆದರೆ 18 ನೇ ಓವರ್ ಎಸೆದ ಭುವಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪಾಲಾಗಿಸಿದರು.
ಈ ಓವರ್ ನಲ್ಲಿ ಒಟ್ಟು ಮೂರು ಎಸೆತಗಳಲ್ಲಿ ಮೂರು ವಿಕೆಟ್ ಬಿದ್ದವು. ಅದರಲ್ಲಿ ಎರಡು ಭುವಿ ಪಾಲಾದರೆ ಇನ್ನೊಂದು ರನೌಟ್. ಹಾಗಾಗಿ ಭಾರತ ನೀಡಿದ ಆಘಾತಕ್ಕೆ ಆಫ್ರಿಕಾ ಮಕಾಡೆ ಮಲಗಿತು. ಭುವನೇಶ್ವರ್ ಕುಮಾರ್ ಹೆನ್ರಿಚ್ ಕ್ಲಾಸೆನ್ ಮತ್ತು ಕ್ರಿಸ್ ಮೋರಿಸ್ ವಿಕೆಟ್ ನ್ನು ಆ ಓವರ್ ನ 4 ಮತ್ತು ಐದನೇ ಎಸೆತಕ್ಕೆ ಎಗರಿಸಿದರು. ಹೀಗಾಗಿ ಅಂತಿಮ ಎಸೆತದಲ್ಲಿ ಅವರಿಗೆ ಹ್ಯಾಟ್ರಿಕ್ ಛಾನ್ಸ್ ಒದಗಿತ್ತು.
ಈ ವೇಳೆ ಕ್ರೀಸ್ ಗೆ ಬಂದ ಪ್ಯಾಟರ್ಸನ್ ಭುವಿ ಕೈಗೆ ವಿಕೆಟ್ ಒಪ್ಪಿಸಲಿಲ್ಲ. ಹಾಗಿದ್ದರೂ ಹಾರ್ದಿಕ್ ಪಾಂಡ್ಯ ಮತ್ತು ಧೋನಿ ಚುರುಕಿನ ಫೀಲ್ಡಿಂಗ್ ತಪ್ಪಿಸಲಾಗದೆ ರನೌಟ್ ಆದರು. ಇದರೊಂದಿಗೆ ಟೀಂ ಹ್ಯಾಟ್ರಿಕ್ ಆಯ್ತು. ಭುವನೇಶ್ವರ್ ಗೆ ಹ್ಯಾಟ್ರಿಕ್ ಕೈ ತಪ್ಪಿದರೂ 5 ವಿಕೆಟ್ ಕಬಳಿಸಲು ಯಶಸ್ವಿಯಾದರು. ಕೊನೆಗೆ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ ಗಳಲ್ಲಿ 175 ರನ್ ಗಳಿಸಲಷ್ಟೇ ಶಕ್ತವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ