ಮುಂಬೈ: ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ರನ್ನು ನಡೆಸಿಕೊಂಡ ರೀತಿಯಿಂದಾಗಿ ಇದೀಗ ಕೋಚ್ ರಮೇಶ್ ಪೊವಾರ್ ತಲೆದಂಡವಾಗಲಿದೆ.
ಟಿ20 ವಿಶ್ವಕಪ್ ನಲ್ಲಿ ಮಿಥಾಲಿ ರಾಜ್ ರನ್ನು ಮೂಲೆಗುಂಪು ಮಾಡಿ ಅವಮಾನ ಮಾಡಿದ್ದಾರೆಂದು ರಮೇಶ್ ಪೊವಾರ್ ಮೇಲೆ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಪೊವಾರ್ ಕೂಡಾ ತಮ್ಮ ಸಮರ್ಥನೆಯನ್ನು ಬಿಸಿಸಿಐಗೆ ನೀಡಿದ್ದು, ಮಿಥಾಲಿ ಮೇಲೆ ಪ್ರತ್ಯಾರೋಪ ಮಾಡಿದ್ದಾರೆ.
ಆದರೆ ಈ ಎಲ್ಲಾ ಬೆಳವಣಿಗೆಗಳಿಂದ ತಂಡದಲ್ಲಿ ಬಿರುಕು ಮೂಡಿದೆ. ಇದರಿಂದಾಗಿ ಇದೀಗ ಕೋಚ್ ನ್ನೇ ಬದಲಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. ಹೇಗಿದ್ದರೂ ನಿನ್ನೆಗೆ ರಮೇಶ್ ಪೊವಾರ್ ಕೋಚ್ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹೀಗಾಗಿ ಅವರನ್ನೇ ಮುಂದುವರಿಸದೇ ಹೊಸ ಕೋಚ್ ನ ಹುಡುಕಾಟಕ್ಕೆ ಬಿಸಿಸಿಐ ಮುಂದಾಗಿದೆ. ಈ ಮೂಲಕ ತಂಡದಲ್ಲಿ ಒಳಜಗಳಗಳಿಗೆ ಕೋಚ್ ತಲೆದಂಡ ಮಾಡಲು ಹೊರಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ