ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದ ಸದಸ್ಯರಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬರು. ಆದರೆ ಪಾಂಡ್ಯ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿಲ್ಲ.
ಗಾಯಾಳಾಗಿರುವ ಪಾಂಡ್ಯ ಪ್ರಸಕ್ತ ಐಪಿಎಲ್ ನಲ್ಲೂ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಹೀಗಿರುವಾಗ ಅವರನ್ನು ಮರಳಿ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂಬ ಸುದ್ದಿಯಿದೆ.
ಹಾಗಿದ್ದ ಮೇಲೆ ಅನ್ ಫಿಟ್ ಆಗಿರುವ ಆಟಗಾರನನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದೇಕೆ ಎಂಬ ಟೀಕೆ ವ್ಯಕ್ತವಾಗಿದೆ. ಮಾಜಿ ಕ್ರಿಕೆಟರ್ ಸಬಾ ಕರೀಂ ಸೇರಿದಂತೆ ಅನೇಕರು ಹಾರ್ದಿಕ್ ರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಅನೇಕ ಪ್ರತಿಭಾವಂತ ಕ್ರಿಕೆಟಿಗರಿರುವಾಗ ಗಾಯಾಳುವಾಗಿರುವ ಆಟಗಾರನನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಔಚಿತ್ಯವೇನು? ಗಾಯಾಳಾಗಿದ್ದರೆ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಸಿಸಿಐಯನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.