ಮುಂಬೈ: ಕ್ರಿಕೆಟ್ ಟೂರ್ನಮೆಂಟ್ ಗೆಂದು ಊರೂರು ತಿರುಗಾಡುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ತಕ್ಷಣವೇ ಕೊವಿಡ್ ವ್ಯಾಕ್ಸಿನ್ ಕೊಡಿಸಿ ಎಂದು ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ವ್ಯಾಕ್ಸಿನ್ ನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ವಯೋವೃದ್ಧರಿಗೆ ನೀಡುತ್ತಿದೆ. ಆದರೆ ಕ್ರಿಕೆಟಿಗರು ಪ್ರವಾಸ ಕೈಗೊಂಡಾಗ ಕಠಿಣ ಕ್ವಾರಂಟೈನ್ ಗೊಳಗಾಗಬೇಕಾಗುತ್ತಿದೆ. ಇದರಿಂದ ಅವರ ಅಭ್ಯಾಸಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವ್ಯಾಕ್ಸಿನ್ ಪಡೆಯಲು ಅವಕಾಶ ಕೊಡಿ ಎಂದು ಬಿಸಿಸಿಐ ಮನವಿ ಮಾಡಿದೆ ಎನ್ನಲಾಗಿದೆ.