Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉದ್ದೀಪನಾ ಮದ್ಧು ಸೇವನೆ ತಡೆಗೆ ಬಿಸಿಸಿಐ ಸಹಾಯವಾಣಿ

ಉದ್ದೀಪನಾ ಮದ್ಧು ಸೇವನೆ ತಡೆಗೆ ಬಿಸಿಸಿಐ ಸಹಾಯವಾಣಿ
mumbai , ಶನಿವಾರ, 26 ನವೆಂಬರ್ 2016 (09:49 IST)
ಮುಂಬೈ: ತಿಳುವಳಿಕೆಯ ಕೊರತೆಯಿಂದ ಉದ್ದೀಪನಾ ಔಷಧಿ ಸೇವಿಸುವುದನ್ನು ತಡೆಗಟ್ಟುವ ಸಲುವಾಗಿ ಆಟಗಾರರಿಗೆ ಮಾಹಿತಿ ನೀಡಲು ಬಿಸಿಸಿಐ ಸಹಾಯವಾಣಿಯೊಂದನ್ನು ತೆರೆದಿದೆ.

ಇದರಿಂದ ದೇಶದ ಎಲ್ಲಾ ದೇಶೀಯ ಮಹಿಳಾ ಮತ್ತು ಪುರುಷ ಕ್ರಿಕೆಟಿಗರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.  ಇದನ್ನು ಚಾಲ್ತಿಗೆ ತಂದ ದೇಶದ ಮೊದಲ ಕ್ರೀಡಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಸಿಸಿಐ ಪಾತ್ರವಾಗಲಿದೆ.

2015 ರಲ್ಲಿ ಬಿಸಿಸಿಐ 175 ಉದ್ದೀಪನಾ ಪರೀಕ್ಷೆ ನಡೆಸಿತ್ತು, ಆದರೆ ಯಾವುದೂ ಸಾಬೀತಾದ ಪ್ರಕರಣಗಳಿರಲಿಲ್ಲ. ಭಾರತದ ಕ್ರಿಕೆಟಿಗರ ಪೈಕಿ ಉದ್ದೀಪನಾ ಔಷಧಿ ತೆಗೆದುಕೊಂಡು ನಿಷೇಧಕ್ಕೊಳಗಾದ ಏಕೈಕ ಕ್ರಿಕೆಟಿಗ ಪ್ರದೀಪ್ ಸಾಂಗ್ವಾನ್. ಅವರ ಪ್ರಕರಣ ಮತ್ತೆ ಮರುಕಳಿಸದಂತೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ.

ವಾರ್ಷಿಕವಾಗಿ ಬಿಸಿಸಿಐ ಉದ್ದೀಪನಾ ಔಷಧ ತಡೆ ಕಾರ್ಯಕ್ರಮಕ್ಕೆ ಒಂದು ಕೋಟಿ ರೂ. ವೆಚ್ಚ ಮಾಡುತ್ತಿದ್ದು,  ಸಹಾವಾಣಿ ಕೂಡಾ ಇದಕ್ಕೆ ಸೇರ್ಪಡೆಯಾಗಲಿದೆ. ಎಲ್ಲಾ ದೇಶೀಯ ಕ್ರಿಕೆಟಿಗರು ಇದರ ಲಾಭ ಪಡೆಯಬಹುದು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಾಲಿ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ