ಮುಂಬೈ: ನಿಷೇಧ ಶಿಕ್ಷೆ ತೆರವುಗೊಂಡ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಹಾರ್ದಿಕ್ ಪಾಂಡ್ಯರನ್ನು ಮರಳಿ ಸೇರ್ಪಡೆಗೊಳಿಸಿರುವುದಕ್ಕೆ ಬಿಸಿಸಿಐ ಅಧಿಕಾರಿಗಳೊಳಗೇ ಅಸಮಾಧಾನ ಶುರುವಾಗಿದೆ.
ಕ್ರಿಕೆಟಿಗರ ಮೇಲಿನ ನಿಷೇಧ ತೆರವುಗೊಳಿಸಿರುವ ಆಡಳಿತ ಮಂಡಳಿ ನಿರ್ಧಾರದ ಬಗ್ಗೆಯೇ ಅಪಸ್ವರವೆತ್ತಿರುವ ಕೆಲವು ಅಧಿಕಾರಿಗಳು ಪಾಂಡ್ಯರನ್ನು ತಕ್ಷಣವೇ ನ್ಯೂಜಿಲೆಂಡ್ ಗೆ ಕಳುಹಿಸಿರುವುದರ ಔಚಿತ್ಯವನ್ನೂ ಪ್ರಶ್ನಿಸಿದ್ದಾರೆ.
ಇದರಿಂದ ಪಾಂಡ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದ ಯುವ ಆಲ್ ರೌಂಡರ್ ವಿಜಯ್ ಶಂಕರ್ ರಂತಹ ಪ್ರತಿಭಾವಂತರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂಬುದು ಕೆಲವು ಬಿಸಿಸಿಐ ಅಧಿಕಾರಿಗಳ ವಾದ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ