ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯಕ್ಕೆ ನೂತನ ಮ್ಯಾಚ್ ರೆಫರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಕ್ರಿಸ್ ಬ್ರಾಡ್ ರನ್ನು ಕಿತ್ತೊಗೆಯಲಾಗಿದೆ.
ಕ್ರಿಸ್ ಬ್ರಾಡ್ ಕಾರ್ಯ ವೈಖರಿ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿರುವ ಹಿನ್ನಲೆಯಲ್ಲಿ ಐಸಿಸಿ ಮೇಲೆ ಒತ್ತಡ ಹೇರಿ ಅವರನ್ನು ಕಿತ್ತು ಹಾಕಲಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿಉಳಿದೆರಡು ಟೆಸ್ಟ್ ಪಂದ್ಯಗಳಿಗೆ ರಿಚರ್ಡ್ ಸನ್ ರೆಫರಿಯಾಗಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ನಡೆದ ಪುಣೆ ಪಿಚ್ ಕಳಪೆ ಎಂದು ಐಸಿಸಿಗೆ ಕ್ರಿಸ್ ಬ್ರಾಡ್ ವರದಿ ನೀಡಿದ್ದು, ದ್ವಿತೀಯ ಟೆಸ್ಟ್ ನಲ್ಲಿ ಡಿಆರ್ ಎಸ್ ವಿವಾದ ವಿಚಾರದಲ್ಲಿ ನಡೆದುಕೊಂಡ ರೀತಿ ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಬೆಂಗಳೂರು ಟೆಸ್ಟ್ ನಲ್ಲಿ ಹಲವು ವಿವಾದಾತ್ಮಕ ತೀರ್ಪು ನೀಡಿದ್ದ ಅಂಪಾಯರ್ ನೈಜಲ್ ಲಾಂಗ್ ಈ ಪಂದ್ಯದಲ್ಲಿ ಕೇವಲ ಟಿವಿ ಅಂಪಾಯರ್ ಆಗಿರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ