ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವು ಎಂದರೆ ಕೆಎಲ್ ರಾಹುಲ್. ಏನೇ ಮಾಡಿದರೂ ರಾಹುಲ್ ತಮ್ಮ ಫಾರ್ಮ್ ಸುಧಾರಿಸದೇ ಇರುವುದರ ಬಗ್ಗೆ ಕೋಚ್ ಸಂಜಯ್ ಬಂಗಾರ್ ಸಿಟ್ಟಿಗೆದ್ದಿದ್ದಾರೆ.
ರಾಹುಲ್ ಔಟಾಗಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ ಎಂದು ಸಂಜಯ್ ಬಂಗಾರ್ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ತಂಡದಲ್ಲಿ ಬೇರೆಲ್ಲಾ ಬ್ಯಾಟ್ಸ್ ಮನ್ ಗಳೂ ಬೇಗನೇ ತಮ್ಮ ಫಾರ್ಮ್ ಕಂಡುಕೊಂಡಿರುವಾಗ ರಾಹುಲ್ ಮಾತ್ರ ಅಭ್ಯಾಸ ಪಂದ್ಯದಲ್ಲೂ ಕಳಪೆ ಮೊತ್ತಕ್ಕೆ ಔಟಾಗಿರುವುದು ಬಂಗಾರ್ ಸಿಟ್ಟಿಗೆ ಕಾರಣವಾಗಿದೆ.
ಅದೂ ಪದೇ ಪದೇ ಕೆಟ್ಟ ಹೊಡೆತ ಹೊಡೆಯಲು ಹೋಗಿ ರಾಹುಲ್ ಔಟಾಗುತ್ತಿದ್ದು, ತಪ್ಪು ತಿದ್ದದೇ ಮತ್ತೆ ಅದೇ ತಪ್ಪು ಮಾಡುತ್ತಿರುವುದು ಕೋಚ್ ಆಕ್ರೋಶಕ್ಕೆ ಕಾರಣವಾಗಿದೆ. ‘ರಾಹುಲ್ ತಾಂತ್ರಿಕತೆಯಲ್ಲಿ ದೋಷವಿಲ್ಲ. ಆದರೆ ಆಟಕ್ಕೆ ಕುದುರಿಕೊಳ್ಳುವ ಮೊದಲು ತಪ್ಪು ಹೊಡೆತ ಹೊಡೆಯಲು ಹೋಗಿ ಔಟಾಗುತ್ತಿದ್ದಾರೆ. ಆದರೆ ತಪ್ಪು ತಿದ್ದಿಕೊಳ್ಳದಂತ ಎಳಸು ಆಟಗಾರ ಅವರಲ್ಲ. ಎರಡನೆಯ ಬಾರಿಗೆ ಆಸೀಸ್ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಸ್ವಲ್ಪ ಜವಾಬ್ಧಾರಿಯುತವಾಗಿ ಆಡಬೇಕು’ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.