ಮುಂಬೈ: ಇಷ್ಟು ದಿನ ಕ್ರಿಕೆಟ್ ನಲ್ಲಿ ಬಳಕೆಯಲ್ಲಿದ್ದ ಬ್ಯಾಟ್ಸ್ ಮನ್ ಅಥವಾ ಬ್ಯಾಟ್ಸ್ ಮೆನ್ ಪದಕ್ಕೆ ಇನ್ನು ಮುಕ್ತಿ ಸಿಗಲಿದೆ. ಇನ್ನು ಮುಂದೆ ಈ ಪದ ಬಳಕೆಗೆ ನಿಷೇಧ ಹೇರಲಾಗಿದೆ.
ಕ್ರಿಕೆಟ್ ನಲ್ಲಿ ಲಿಂಗ ಸಮಾನತೆ ತರುವ ಉದ್ದೇಶದಿಂದ ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬ್ಯಾಟ್ಸ್ ಮ್ಯಾನ್ ಅಥವಾ ಬ್ಯಾಟ್ಸ್ ಮೆನ್ ಪದ ಬಳಕೆಗೆ ನಿಷೇಧ ಹೇರಿದೆ. ಇದರ ಬದಲು ಬ್ಯಾಟರ್ಸ್ ಎಂದು ಬಳಸಬೇಕಾಗಿದೆ.
ಬ್ಯಾಟ್ಸ್ ಮ್ಯಾನ್ ಪದ ಮಹಿಳಾ ಕ್ರಿಕೆಟ್ ಗೆ ತಾರತಮ್ಯ ಮಾಡಿದಂತಾಗುತ್ತದೆ. ಹೀಗಾಗಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಅನ್ವಯವಾಗುವಂತೆ ಬ್ಯಾಟರ್ಸ್ ಪದ ಬಳಸಬೇಕಾಗಿದೆ. ಆದರೆ ಬೌಲರ್, ಫೀಲ್ಡರ್ ಎಂಬ ಪದದಲ್ಲಿ ಯಾವುದೇ ಬದಲಾವಣೆ ಇರಲ್ಲ.