ಇಸ್ಲಾಮಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಬಾಬರ್ ಅಜಂ ರಾಜೀನಾಮೆ ನೀಡಿದ್ದಾರೆ.
ಲೀಗ್ ಹಂತದಲ್ಲೇ ಮುಗ್ಗರಿಸಿ ಪಾಕಿಸ್ತಾನಕ್ಕೆ ಮರಳಿದ ಬೆನ್ನಲ್ಲೇ ಬಾಬರ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ. ಅವರ ಈ ರಾಜೀನಾಮೆ ನಿರೀಕ್ಷಿತವಾಗಿತ್ತು.
2019 ರಲ್ಲಿ ನಾಯಕನಾಗಿ ಆಯ್ಕೆಯಾಗಿದ್ದು ಇನ್ನೂ ನನಗೆ ನೆನಪಿದೆ. ಈ ಸ್ಥಾನದಲ್ಲಿ ಹಲವು ಖುಷಿಯ ಮತ್ತೆ ಕೆಲವು ಬೇಸರದ ಕ್ಷಣಗಳನ್ನು ಕಳೆದಿದ್ದೇನೆ. ಆದರೆ ಪಾಕ್ ತಂಡದ ಘನತೆಯನ್ನು ಹೆಚ್ಚಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಏಕದಿನದಲ್ಲಿ ಪಾಕ್ ವಿಶ್ವ ನಂ.1 ಆಗಲು ಇಡೀ ತಂಡದ ಪರಿಶ್ರಮ ಕಾರಣ. ಇದುವರೆಗೆ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಎಂದು ರಾಜೀನಾಮೆ ಸಂದೇಶದಲ್ಲಿ ಹೇಳಿದ್ದಾರೆ.
ಬಾಬರ್ ಅಜಂ ರಾಜೀನಾಮೆ ಸಲ್ಲಿಸುತ್ತಿದ್ದಂತೇ ಪಾಕ್ ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ಮತ್ತು ಕಿರು ಮಾದರಿಗೆ ವೇಗಿ ಶಾಹಿನ್ ಅಫ್ರಿದಿ ಅವರನ್ನು ನಾಯಕರಾಗಿ ನೇಮಿಸಲಾಗಿದೆ.