Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೂತನ ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆ; ಆಸೀಸ್‌ಗೆ ಅಗ್ರಪಟ್ಟ

ನೂತನ ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆ; ಆಸೀಸ್‌ಗೆ ಅಗ್ರಪಟ್ಟ
ದುಬೈ , ಮಂಗಳವಾರ, 6 ಸೆಪ್ಟಂಬರ್ 2016 (11:15 IST)
ಐಸಿಸಿ ನೂತನ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಕ್ರಮವಾಗಿ ಶ್ರೀಲಂಕಾ ವಿರುದ್ಧ ಸರಣಿಯನ್ನು ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

124 ಅಂಕ ಸಂಪಾದಿಸಿರುವ ಆಸೀಸ್ ಮೊದಲ ಸ್ಥಾನದಲ್ಲಿದ್ದರೆ, 113 ಅಂಕ ಗಳಿಸಿರುವ ನ್ಯೂಜಿಲೆಂಡ್ ಎರಡನೆಯ ಸ್ಥಾನದಲ್ಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 110 ಅಂಕ ಗಳಿಸಿದ್ದರೂ ದಶಾಂಶಗಳ ಅಂಕಗಳ ಆಧಾರದ ಮೇಲೆ ಭಾರತಕ್ಕೆ ಮೂರನೆಯ ಸ್ಥಾನ ಲಭಿಸಿದೆ. 
 
ತವರು ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್ (104 ಅಂಕ) ತನ್ನ ಸ್ಥಾನದಲ್ಲಿ ಬಡ್ತಿ ಪಡೆದಿದ್ದು 5ನೆಯ ಸ್ಥಾನಕ್ಕೇರಿದೆ. ಆಸೀಸ್ ವಿರುದ್ಧ ಹೀನಾಯ ಸೋಲು ಕಂಡ ಲಂಕನ್ನರು 101 ಅಂಕಗಳೊಂದಿಗೆ 6ನೆಯ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
 
98 ಅಂಕ ಗಳಿಸಿ ಬಾಂಗ್ಲಾ 7 ನೇ ಸ್ಥಾನ, 94 ಅಂಕದೊಂದಿಗೆ ವೆಸ್ಟ್ ಇಂಡೀಸ್ 8 ಮತ್ತು 86 ಅಂಕದೊಂದಿಗೆ ಪಾಕ್ 9 ನೇ ಸ್ಥಾನದಲ್ಲಿದೆ.
 
2001ರಿಂದ ಈ ಶ್ರೇಯಾಂಕ ಪದ್ಧತಿ ಜಾರಿಗೆ ಬಂದಾಗಿನಿಂದ ಮೊದಲ ಬಾರಿಗೆ ಪಾಕ್ ಇಷ್ಟು ಕಡಿಮೆ ಅಂಕಕ್ಕೆ ಕುಸಿದಿದೆ. 
 
2019ರಲ್ಲಿ ನಡೆಯಲಿರುವ ವಿಶ್ವ ಕಪ್‌ಗೆ ನೇರ ಪ್ರವೇಶ ಗಿಟ್ಟಿಸಬೇಕೆಂದರೆ ಪಾಕ್ ಮುಂಬರುವ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಏಕದಿನ ಸರಣಿಗಳಲ್ಲಿ ತಮ್ಮ ಅಂಕವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಪಾಕ್‌ಗೆ ಅರ್ಹತಾ ಸುತ್ತು ಆಡುವುದು ಅನಿವಾರ್ಯ. 
 
30 ಸೆಪ್ಟೆಂಬರ್ 2017ರೊಳಗೆ ಟಾಪ್ 8 ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .
 

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣು ವಿವಾದ: ಧೋನಿಗೆ ಬಿಗ್ ರಿಲೀಫ್