Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾರ್ಡರ್-ಗವಾಸ್ಕರ್ ಟೆಸ್ಟ್: ಆಸ್ಟ್ರೇಲಿಯಾ ಆಲೌಟ್, ಟೀಂ ಇಂಡಿಯಾಗೆ ಬೃಹತ್ ಗುರಿ

ಬಾರ್ಡರ್-ಗವಾಸ್ಕರ್ ಟೆಸ್ಟ್: ಆಸ್ಟ್ರೇಲಿಯಾ ಆಲೌಟ್, ಟೀಂ ಇಂಡಿಯಾಗೆ ಬೃಹತ್ ಗುರಿ
ಅಹಮ್ಮದಾಬಾದ್ , ಶುಕ್ರವಾರ, 10 ಮಾರ್ಚ್ 2023 (16:32 IST)
ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 480 ಕ್ಕೆ ಆಲೌಟ್ ಆಗಿದೆ.

ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಗೆ ಉಸ್ಮಾನ್ ಖವಾಜ ಮತ್ತು ಕ್ಯಾಮರೂನ್ ಗ್ರೀನ್ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಇಬ್ಬರ ಜೊತೆಯಾಟದಿಂದ ಭಾರತೀಯ ಬೌಲರ್ ಗಳು ಸುಸ್ತಾದರು. ಈ ಪೈಕಿ ಉಸ್ಮಾನ್ ಖವಾಜ 180 ರನ್ ಗಳಿಸಿದರೆ ಕ್ಯಾಮರೂನ್ ಗ್ರೀನ್ 114 ರನ್ ಗಳಿಸಿದರು.

ಭಾರತೀಯ ಬೌಲರ್ ಗಳ ಪೈಕಿ ರವಿಚಂದ್ರನ್ ಅಶ್ವಿನ್ 6, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ತಲಾ 1 ಮೊಹಮ್ಮದ್ ಶಮಿ 2ವಿಕೆಟ್ ತಮ್ಮದಾಗಿಸಿಕೊಂಡರು. ಬರೋಬ್ಬರಿ ಒಂದೂ ಮುಕ್ಕಾಲು ದಿನದ ಆಟ ಮುಗಿದಿದ್ದು, ಇದೀಗ ಭಾರತ ಬೃಹತ್ ಮೊತ್ತ ದಾಟಬೇಕಿದೆ. ಇದೀಗ ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ.       

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಟ ಬ್ಯಾಟಿಂಗ್ ಪಿಚ್ ನಲ್ಲಿ ಟೀಂ ಇಂಡಿಯಾ ಬೌಲರ್ ಗಳು ಸುಸ್ತು