ಮುಂಬೈ: ಇಂಗ್ಲೆಂಡ್ ಸರಣಿಗೆ ತೆರಳಲು ನವದೆಹಲಿ ವಿಮಾನವೇರುವ ಮೊದಲು ಮುಂಬೈನಲ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣಕ್ಕೆ ಪತಿ ವಿರಾಟ್ ಬೀಳ್ಕೊಡಲು ಸ್ವತಃ ಅನುಷ್ಕಾ ಬಂದಿದ್ದರು. ಅಷ್ಟೇ ಅಲ್ಲದೆ, ವಿರಾಟ್ ರನ್ನು ತಬ್ಬಿ, ಮುತ್ತಿಕ್ಕಿ ಕಳುಹಿಸಿಕೊಟ್ಟಿದ್ದಾರೆ.
ಸದಾ ಪತ್ನಿ ಅನುಷ್ಕಾ ತನಗೆ ಸ್ಪೂರ್ತಿ ಎನ್ನುವ ವಿರಾಟ್ ಕೊಹ್ಲಿ ಈಗ ಸಿಕ್ಕಿರುವ ರೊಮ್ಯಾಂಟಿಕ್ ಸ್ಪೂರ್ತಿಯಿಂದ ಮತ್ತಷ್ಟು ಚೆನ್ನಾಗಿ ಆಡಲಿ ಎಂಬುದು ಅಭಿಮಾನಿಗಳ ಅಪೇಕ್ಷೆ. ಅಂದ ಹಾಗೆ ಕೆಲವು ದಿನಗಳ ನಂತರ ಪತಿ ಜತೆ ಸಮಯ ಕಳೆಯಲು ಅನುಷ್ಕಾ ಕೂಡಾ ಲಂಡನ್ ವಿಮಾನವೇರಲಿದ್ದಾರೆ ಎಂಬ ಸುದ್ದಿಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.