ವೆಲ್ಲಿಂಗ್ಟನ್: ಅಂಬಟಿ ರಾಯುಡು ಮತ್ತು ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮತ್ತೊಂದು ಬ್ಯಾಟಿಂಗ್ ಮುಜುಗರಕ್ಕೀಡಾಗುವುದನ್ನು ಟೀಂ ಇಂಡಿಯಾ ತಪ್ಪಿಸಿಕೊಂಡಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ಎದುರಾಳಿಗೆ 253 ರನ್ ಗಳ ಗೆಲುವಿನ ಗುರಿ ನೀಡಿದೆ. ಭಾರತ 49.5 ಓವರ್ ಗಳಲ್ಲಿ 252 ರನ್ ಗಳಿಗೆ ಆಲೌಟ್ ಆಗಿದೆ.
ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು (90) ಮತ್ತು ವಿಜಯ್ ಶಂಕರ್ (45) ಉತ್ತಮ ಜತೆಯಾಟವಾಡಿ ಭಾರತದ ಮಾನ ಕಾಪಾಡಿದರು. ಬಳಿಕ ಕೇದಾರ್ ಜಾದವ್ 34, ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 45 ರನ್ ಗಳಿಸಿ ಮೊತ್ತ ಉಬ್ಬಲು ಕಾರಣವಾಗಿದೆ. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 4, ಟ್ರೆಂಟ್ ಬೌಲ್ಟ್ 3 ಮತ್ತು ಜೇಮ್ಸ್ ನೀಶಂ 1 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ