ಮುಂಬೈ: ಪ್ರತಿಭೆಯಿದ್ದರೂ ಟೀಂ ಇಂಡಿಯಾದಲ್ಲಿ ಸ್ಥಿರವಾಗಿ ಅವಕಾಶ ಸಿಗದೇ ಇರುವ ಆಟಗಾರರೆಂದರೆ ಅಜಿಂಕ್ಯಾ ರೆಹಾನೆ ಕೂಡಾ ಒಬ್ಬರು. ಈ ಬಗ್ಗೆ ರೆಹಾನೆ ಹೇಳಿದ್ದೇನು ಗೊತ್ತಾ?
‘ಆಗಾಗ ನನಗೆ ತಂಡದಿಂದ ಕೊಕ್ ಕೊಡುವುದಕ್ಕೆ ಬೇಸರವಿಲ್ಲ. ನಿಜ ಹೇಳಬೇಕೆಂದರೆ ಇದು ನನಗೆ ಸ್ಪೂರ್ತಿ ನೀಡುತ್ತದೆ. ಸದ್ಯಕ್ಕೆ ನಾನು ಗಮನಕೊಡುತ್ತಿರುವುದು ಟೆಸ್ಟ್ ಕ್ರಿಕೆಟ್ ಕಡೆಗೆ. ಆದರೆ 2019 ರ ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವ ಗುರಿ ಇದೆ’ ಎಂದು ರೆಹಾನೆ ಹೇಳಿಕೊಂಡಿದ್ದಾರೆ.
ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೆಹಾನೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಸದ್ಯಕ್ಕೆ ತನ್ನ ಗಮನವೆಲ್ಲಾ ಇದರ ಮೇಲೆಯೇ ಎಂದು ರೆಹಾನೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.