ಮುಂಬೈ: ಟಿವಿ ಬರುವ ಮೊದಲಿನ ಕಾಲ. ಹಳೆಯ ಕಾಲದ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ಸಾಧನ. ರೇಡಿಯೋಗೆ ಕಿವಿಯಾನಿಸಿ ಕೂರುತ್ತಿದ್ದ ಕಾಲ ಮತ್ತೆ ಮರುಕಳಿಸಲಿದೆ.
ಅಂದರೆ ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಒದಗಿಸಲು ಬಿಸಿಸಿಐ ಚಿಂತನೆ ನಡೆಸಿದೆ. 2012 ರಿಂದ ಇದು ಸ್ಥಗಿತವಾಗಿತ್ತು. ಆದರೆ ಮತ್ತೆ ರೇಡಿಯೋ ಜನಪ್ರಿಯತೆ ಮತ್ತು ಕೇಳುಗರ ಒತ್ತಾಯದ ಮೇರೆಗೆ ಕ್ರಿಕೆಟ್ ನ್ನು ತೀರಾ ಹಳ್ಳಿಗಳಲ್ಲೂ ಪ್ರಚುರಪಡಿಸಲು ಬಿಸಿಸಿಐ ಇಂತಹದ್ದೊಂದು ಚಿಂತನೆ ನಡೆಸಿದೆ.
ಟಿವಿ ಬಂದ ಮೇಲೆ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುವವರೇ ಇಲ್ಲ ಎಂಬಂತಾಗಿತ್ತು. ಆದರೆ ಟಿವಿ ಸೌಲಭ್ಯವಿಲ್ಲದ ಹಳ್ಳಿ ಪ್ರದೇಶಗಳಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸಬೇಕಾದರೆ ರೇಡಿಯೋವೇ ಆಗಬೇಕು. ಅದಕ್ಕಾಗಿ ಮತ್ತೆ ರೇಡಿಯೋದಲ್ಲಿ ಕಾಮೆಂಟರಿ ನೀಡಲು ಉದ್ದೇಶಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ