ಮುಂಬೈ: ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗಲಿದೆ.
ಒಂದು ವೇಳೆ ವಿಶ್ವಕಪ್ ಗೆಲ್ಲದೇ ಹೋದರೆ ರೋಹಿತ್ ಶರ್ಮಾ ನಾಯಕತ್ವವೂ ಕೊನೆಯಾಗಬಹುದು. ಆಗ ಸೀಮಿತ ಓವರ್ ಗಳಿಗೆ ಖಾಯಂ ಆಗಿ ಹಾರ್ದಿಕ್ ಪಾಂಡ್ಯ ನಾಯಕರಾಗಬಹುದು.
ಅವರು ನಾಯಕರಾದಲ್ಲಿ ಐಪಿಎಲ್ ನಲ್ಲಿ ಗುಜರಾತ್ ಕೋಚ್ ಆಗಿರುವ ಆಶಿಷ್ ನೆಹ್ರಾ ಟೀಂ ಇಂಡಿಯಾ ಮುಖ್ಯ ಕೋಚ್ ಆಗುವ ಸಾಧ್ಯತೆಯಿದೆ. ಒಂದು ವೇಳೆ ವಿಶ್ವಕಪ್ ಗೆದ್ದರೆ ರಾಹುಲ್ ದ್ರಾವಿಡ್ ಕಿರು ಅವಧಿಗೆ ಕೋಚ್ ಆಗಿ ಮುಂದುವರಿಯಬಹುದು. ಇಲ್ಲದೇ ಹೋದಲ್ಲಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಖಂಡಿತಾ.