Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳಿಗೆ ಕೊರೊನಾ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ

ಮಕ್ಕಳಿಗೆ ಕೊರೊನಾ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ
ನವದೆಹಲಿ , ಬುಧವಾರ, 25 ಆಗಸ್ಟ್ 2021 (13:32 IST)
ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಜೈಡಸ್ ಕ್ಯಾಡಿಲ್ಲ ಮಕ್ಕಳ(12- 17) ಲಸಿಕೆ ಬಳಕೆಗೆ ಅನುಮತಿ ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವುದಿಲ್ಲ. ವಯಸ್ಕರಿಗೆ ಲಸಿಕೆ ಹಂಚಿಕೆ ಪೂರ್ತಿಯಾದ ಬಳಿಕವಷ್ಟೇ ಮಕ್ಕಳಿಗೆ ಲಸಿಕಾ ಹಂಚಿಕೆ ನಡೆಯಲಿದೆ ಎಂದು ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಕ್ಟೋಬರ್ ನಿಂದ ಜೈಡಸ್ ಕೊರೊನಾ ಲಸಿಕೆ ನೀಡಲಾಗುವುದು.
ವಯಸ್ಕರಿಗೆ ಕೊರೊನಾ ಭೀತಿ ಹೆಚ್ಚಿರುವುದರಿಂದ ಮೊದಲ ಪ್ರಾಶಸ್ತ್ಯ ಅವರಿಗೆ ನೀಡಲಾಗುತ್ತಿದೆ. ನಂತರ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಲಸಿಕಾಕರಣದ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ ಅರೋರಾ ತಿಳಿಸಿದ್ದಾರೆ.
ಕೊರೊನಾದಿಂದ ಮಕ್ಕಳಿಗೆ ಇರುವ ಅಪಾಯದ ಮಟ್ಟ ಅತ್ಯಲ್ಪ. ಹೀಗಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಲಸಿಕೆ ಅಭಿವೃದ್ಧಿಗೊಂಡಾಗ ಅವರಿಗೆ ಲಸಿಕೆ ನೀದಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಕೊರೊನಾ ಲಸಿಕೆಗಳು ಯಾವುವೂ ಕೊರೊನಾ ಹರಡುವಿಕೆಯನ್ನು ತಡೆಯುವುದಿಲ್ಲ. ಕೊರೊನಾ ತಗುಲಿದ ನಂತರ ಆಸ್ಪತ್ರೆಗೆ ದಾಖಲಾಗದಂತೆ, ಸೋಂಕಿತ ಹೆಚ್ಚಿನ ಆರೋಗ್ಯ ಸಮಸ್ಯೆಗೆ ತುತ್ತಾಗದಂತೆ ತಡೆಯುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ