ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕುಟುಂಬಸ್ಥರಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಸ್ವತಃ ಸಚಿವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.
ಸುಧಾಕರ್ ಪತ್ನಿ, ಓರ್ವ ಪುತ್ರಿ ಮತ್ತು ತಂದೆಗೆ ಕೊರೋನಾ ಖಚಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸಚಿವರೂ ಸ್ವಯಂ ಕ್ವಾರಂಟೈನ್ ಗೊಳಗಾಗಿದ್ದಾರೆ.
ಆದರೆ ಸರ್ಕಾರದ ಕೆಲಸ ಮುಂದುವರಿಸಲೇ ಬೇಕಲ್ಲವೇ? ಅದೂ ಹೇಳಿ ಕೇಳಿ ಕೊರೋನಾ ನಿರ್ವಹಣೆ ವಿಚಾರದಲ್ಲಿ ಸುಧಾಕರ್ ಸಿಎಂ ಯಡಿಯೂರಪ್ಪನವರಿಗೆ ಬಲಗೈ ಬಂಟನಂತಿದ್ದಾರೆ. ಹೀಗಿರುವಾಗ ಸಚಿವರು ಈಗ ಅಕ್ಷರಶಃ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಮನೆಯಿಂದಲೇ ವಿಡಿಯೋ ಮೂಲಕ ಅಧಿಕಾರಿಗಳ ಜತೆ ಸಭೆ ನಡೆಸುವುದು, ಅಗತ್ಯ ಸಲಹೆ ಸೂಚನೆ ನೀಡುವುದರ ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ಜನರ ಜತೆಗೂ ಸಂವಾದ ನಡೆಸುವ ಕೆಲಸ ಮಾಡುತ್ತಿದ್ದಾರೆ.