ನವದೆಹಲಿ: ಕೊರೋನಾ ಎಂಬ ಮಹಾಮಾರಿಯಿಂದ ಅದೆಷ್ಟೋ ಜನ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅಂತಹವರು ಈಗ ಕೊಂಚ ನಿಟ್ಟುಸಿರುವ ಬಿಡುವ ಸುದ್ದಿ ಬಂದಿದೆ.
ಲಾಕ್ ಡೌನ್ ವೇಳೆ ಹಲವರು ಉದ್ಯೋಗ ಕಳೆದುಕೊಂಡಿದ್ದರೂ ಜುಲೈ ಬಳಿಕ ಈ ನಿರುದ್ಯೋಗ ಪ್ರಮಾಣ ಕಡಿಮೆಯಾಗಿ, ಉದ್ಯೋಗಾವಕಾಶದ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ ಇನ್ ಇಂಡಿಯಾ (ಸಿಎಂಐಇ) ಅಂಕಿ ಅಂಶ ನೀಡಿದೆ.
ಅದರಲ್ಲೂ ನಗರ ಭಾಗಗಳಲ್ಲಿ ಮತ್ತೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಸಂಸ್ಥೆ ವರದಿ ನೀಡಿದೆ. ಇದು ನಿರುದ್ಯೋಗಿಗಳ ಪಾಲಿಗೆ ಸಮಾಧಾನಕರ ಸುದ್ದಿಯಾಗಿದೆ.