Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

‘ಯಾರಿಗೂ ಇಲ್ಲದ ಸವಲತ್ತು ಸಂಜಯ್ ದತ್ ಗೆ ಯಾಕೆ ಕೊಟ್ಟಿರಿ?’

‘ಯಾರಿಗೂ ಇಲ್ಲದ ಸವಲತ್ತು ಸಂಜಯ್ ದತ್ ಗೆ ಯಾಕೆ ಕೊಟ್ಟಿರಿ?’
Mumbai , ಸೋಮವಾರ, 3 ಜುಲೈ 2017 (15:26 IST)
ಮುಂಬೈ: ಬಾಲಿವುಡ್ ಸ್ಟಾರ್ ಸಂಜಯ್ ದತ್ ರನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈ ವಿಚಾರದಲ್ಲಿ ವಿವರಣೆ ನೀಡುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಎರಡು ವಾರಗಳ ಸಮಯಾವಕಾಶ ನೀಡಿದೆ.


1993 ಮುಂಬೈ ಸರಣಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಸಂಜಯ್ ದತ್ ಗೆ 2013 ರಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರು ಯೆರವಾಡಾದ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.

ಶಿಕ್ಷೆಯ ನಡುವೆ ಆಗಾರ ವೈದ್ಯಕೀಯ ತಪಾಸಣೆ, ಪೆರೋಲ್ ಮೇಲೆ ಬಿಡುಗಡೆಯಾಗಿ ಮನೆಗೆ ತೆರಳುತ್ತಿದ್ದರು. ಇಷ್ಟೂ ಸಾಲದೆಂಬಂತೆ ಅವರು ಬಿಡುಗಡೆಯಾಗಬೇಕಿದ್ದ 8 ತಿಂಗಳ ಮೊದಲೇ ಸರ್ಕಾರ ಅವರನ್ನು ಸನ್ನಡತೆಯ ಆಧಾರದಲ್ಲಿ ಬಂಧ ಮುಕ್ತಗೊಳಿಸಿತ್ತು. ಇದರ ವಿರುದ್ಧ ಬಾಂಬೆ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಇದೀಗ ಬೇರೆ ಖೈದಿಗಳೂ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗುವ ಅರ್ಹತೆ ಹೊಂದಿದ್ದರೂ, ಜೈಲಿನಲ್ಲೇ ಕೊಳೆಯುತ್ತಿರುವಾಗ ಸಂಜಯ್ ದತ್ ಗೆ ಮಾತ್ರ ಹೇಗೆ ವಿಶೇಷ ಸವಲತ್ತು ನೀಡಿ ಬಿಡುಗಡೆ ಮಾಡಿದಿರಿ ಎಂದು ಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಎರಡು ವಾರಗಳೊಳಗೆ ಸರ್ಕಾರ ವಿವರಣೆ ನೀಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾರ ಮೋಸ್ಟ್ ಸ್ಟೈಲಿಷ್ ಫೋಟೋ ಶೂಟ್: ಅಭಿಮಾನಿಗಳನ್ನು ಬೆರಗು ಗೊಳಿಸುತ್ತಿದೆ ಗುಳಿಕೆನ್ನೆ ಬೆಡಗಿ ಸೌಂದರ್ಯ