ಬಾಲಿವುಡ್`ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯಾಗಿದ್ದಾರೆ. ಮದುವೆಯಾಗದಿದ್ದರೂ ಮಕ್ಕಳು ಹೇಗೆ..? ಎಂದು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಬಾಡಿಗೆ ತಾಯಿ ಮೂಲಕ ಕರಣ್ ಮಕ್ಕಳನ್ನ ಪಡೆದಿದ್ದಾರೆ. ಇದರಲ್ಲಿ ಒಂದು ಹೆಣ್ಣು ಮತ್ತೊಂದು ಗಂಡು ಮಗು.
ಸದ್ಯ, ಕರಣ್ ಜೋಹರ್ ಸುದ್ದಿಯನ್ನ ಖಚಿತಪಡಿಸದಿದ್ದರೂ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಮಕ್ಕಳ ಬಗ್ಗೆ ಮಾಹಿತಿ ದಾಖಲಾಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
`ಶುಕ್ರವಾರ ಮಕ್ಕಳ ಜನನದ ಮಾಹಿತಿ ದಾಖಲಾಗಿದೆ ಎಂದು ಮುಂಬೈ ಪಾಲಿಕೆಯ ಕಾರ್ಯಕಾರಿ ಆರೋಗ್ಯಾಧಿಕಾರಿ ಡಾ. ಪದ್ಮಜಾ ಕೆಸ್ಕರ್ ಸ್ಪಷ್ಟಪಡಿಸಿದ್ದಾರೆ. ಈ ದಾಖಲಾತಿಗಳ ಪ್ರಕಾರ, ಅಂಧೇರಿಯ ಮಸ್ರಾಣಿ ಆಸ್ಪತ್ರೆಯಲ್ಲಿ ಫೆಬ್ರವರಿ 7ರಂದೇ ಮಕ್ಕಳ ಜನನವಾಗಿದೆ. ಯಶ್ ಮತ್ತು ರೂಹಿ ಎಂದು ನಾಮಕರಣ ಸಹ ಮಾಡಲಾಗಿದೆ.