Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಸಂಜು' ಚಿತ್ರದಲ್ಲಿ ಸಂಜಯ್ ದತ್ ಮೊದಲ ಪತ್ನಿಯ ಬಗ್ಗೆ ಎಲ್ಲೂ ಉಲ್ಲೇಖ ಮಾಡಿಲ್ಲ ಯಾಕೆ ಗೊತ್ತೇ?

'ಸಂಜು' ಚಿತ್ರದಲ್ಲಿ ಸಂಜಯ್ ದತ್ ಮೊದಲ ಪತ್ನಿಯ ಬಗ್ಗೆ ಎಲ್ಲೂ ಉಲ್ಲೇಖ ಮಾಡಿಲ್ಲ ಯಾಕೆ ಗೊತ್ತೇ?
ಮುಂಬೈ , ಗುರುವಾರ, 26 ಜುಲೈ 2018 (07:28 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ ‘ಸಂಜು’ ಇತ್ತೀಚೆಗೆ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಕೊಳ್ಳೇ ಹೊಡೆಯುವುದರ ಮೂಲಕ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿದೆ. ಆದರೆ ಈ ಸಿನಿಮಾದಲ್ಲಿ ನಟ ಸಂಜಯ್ ದತ್ ಅವರ ಮೊದಲ ಪತ್ನಿಯ ಬಗ್ಗೆಎಲ್ಲೂ ಯಾಕೆ  ಉಲ್ಲೇಖ ಮಾಡಿಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು.


ಇದಕ್ಕೆ ಕಾರಣವೆನೆಂಬುದನ್ನು ಇದೀಗ  ನಟ ಸಂಜಯ್ ದತ್ ಅವರು ತಿಳಿಸಿದ್ದಾರೆ. ‘ಇರುವುದೆಲ್ಲವನ್ನೂ ನಾನು ನಿರ್ದೇಶಕರ ಜೊತೆಗೆ ಹಂಚಿಕೊಂಡಿದ್ದೆ. ಇದನ್ನ ಮಾತ್ರ ತೋರಿಸಿ, ಅಂತ ನಾನು ಹೇಳಿಲ್ಲ. ನನ್ನ ಮೊದಲೆರಡು ಮದುವೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಬೇಡಿ ಅಂತ ನಾನು ನಿರ್ದೇಶಕರಿಗೆ ತಾಕೀತು ಮಾಡಿಲ್ಲ. ಅವರಿಗೆ ಯಾವುದು ಪ್ರಮುಖ ಅಂತ ಅನಿಸಿದ್ಯೋ, ಅದನ್ನಷ್ಟೇ ತೋರಿಸಿದ್ದಾರೆ. ಎಲ್ಲವನ್ನೂ ತೋರಿಸಿದಿದ್ರೆ, ಚಿತ್ರದ ಅವಧಿ ಹೆಚ್ಚಾಗುತ್ತಿತ್ತು'' ಅಂತ ಸಂಜಯ್ ದತ್ ಹೇಳಿದ್ದಾರೆ.


ಹಾಗೇ ''ನನ್ನ ಜೀವನಚರಿತ್ರೆ ಆಧಾರಿತ ಸಿನಿಮಾ ಮಾಡಬೇಕು ಎಂಬ ಐಡಿಯಾ ಬಂದಿದ್ದು ಪತ್ನಿ ಮಾನ್ಯತಾ ಕಡೆಯಿಂದ. ನಾನು ಜೈಲಿನಲ್ಲಿ ಇರುವಾಗ ಈ ಬಗ್ಗೆ ಆಕೆ ನಿರ್ದೇಶಕರ ಜೊತೆಗೆ ಮಾತುಕತೆ ಮಾಡಿದ್ದಳು'' ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜನರಿಗಾಗಿ ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡಿದ ನಟ ಜಾಕಿ ಶ್ರಾಫ್