Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಸ್ಪತ್ರೆ ಸೇರಿದ್ದು ಯಾಕೆ?

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಸ್ಪತ್ರೆ ಸೇರಿದ್ದು ಯಾಕೆ?
ಮುಂಬೈ , ಶುಕ್ರವಾರ, 10 ಆಗಸ್ಟ್ 2018 (08:44 IST)
ಮುಂಬೈ: ಹಿಂದಿ ಸೀರಿಯಲ್ ನಟಿ ಸರಾ ಖಾನ್ ತಮ್ಮ ಹುಟ್ಟುಹಬ್ಬದಂದೇ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.


ಇತ್ತೀಚೆಗಷ್ಟೇ ಸಾರಾ ದುಬೈನಲ್ಲಿ ಸ್ನೇಹಿತರೊಂದಿಗೆ ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಖುಷಿಯಲ್ಲಿ ತಿಂದಂತಾ ಊಟ ಸಾರಾ ಪಾಲಿಗೆ ವಿಷವಾಗಿದೆಯಂತೆ.ಹಾಗಾಗಿ ಸಾರಾಖಾನ್ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಅಪಾಯದಿಂದ ಪಾರಾಗಿದ್ದಾರೆ.

ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಾರಾಖಾನ್, ಹುಟ್ಟುಹಬ್ಬದ ಪಾರ್ಟಿಯಲ್ಲಿ ತಿಂದ ಆಹಾರದಿಂದ ಫುಡ್ ಪಾಯ್ಸನ್ ಆಗಿದೆ. ಹುಟ್ಟುಹಬ್ಬ ಹೀಗೆ ಎಂಡ್ ಆಗುತ್ತೆ ಅಂತ ನಾನು ಅಂದಿಕೊಂಡಿರಲಿಲ್ಲ. ಈ ಹುಟ್ಟುಹಬ್ಬದ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸದ್ಯ ನಾನು ಆರೋಗ್ಯದಿಂದಿದ್ದೇನೆ ಅಂತ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿದ್ದಾರೆ.


ಸಾರಾಖಾನ್ ಪೋಸ್ಟ್ ನೋಡಿದ ಅಭಿಮಾನಿಗಳು ಆಕೆಗೆ ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಬೇಗನೆ ಗುಣಮುಖರಾಗಿ ಅಂತ ಹಾರೈಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ನಡು ತೋರಿಸಿ ತಮಾಷೆಗೀಡಾದಳು ಈ ನಟಿ!