ಹೈದರಾಬಾದ್ : ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ತೆಲುಗು ಚಿತ್ರ ವಿಮರ್ಶಕ ಕತ್ತಿ ಮಹೇಶ್ ಅವರನ್ನು ಹೈದರಾಬಾದ್ ನಿಂದ ಗಡಿಪಾರು ಮಾಡಲಾಗಿದೆ.
ಇತ್ತೀಚೆಗೆ ಶ್ರೀರಾಮ ಮತ್ತು ಸೀತೆ ಕುರಿತು ಅವಹೇಳನ ಹೇಳಿಕೆ ನೀಡಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದರು. ಆದ ಕಾರಣ ಇದೇ ಜುಲೈ 2 ರಂದು ಹೈದರಾಬಾದ್ ಪೊಲೀಸರು ಕತ್ತಿ ಮಹೇಶ್ ರನ್ನು ಬಂಧಿಸಿದ್ದರು.
ಇದೀಗ ಕತ್ತಿ ಮಹೇಶ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಕಾಪಾಡುವ ನಿಟ್ಟಿನಲ್ಲಿ ಅವರನ್ನು ಹೈದರಾಬಾದ್ ನಿಂದ 6 ತಿಂಗಳು ಗಡಿಪಾರು ಮಾಡಲಾಗಿದೆ. ಹೈದರಾಬಾದ್ ನಿಂದ ಆಂಧ್ರಪ್ರದೇಶ ಜಿಲ್ಲೆ ಚಿತ್ತೂರಿಗೆ ಸ್ಥಳಾಂತರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ