ಹೈದರಾಬಾದ್ : ಸುದ್ದಿ ಮಾಧ್ಯಮಗಳು ಜಗತ್ತಿನ ಆಗುಹೋಗುಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಿಳಿಸುತ್ತವೆ ಎಂದು ಎಲ್ಲರೂ ನಂಬಿರುತ್ತಾರೆ. ಆದರೆ ಇತ್ತೀಚೆಗೆ ಸುದ್ದಿ ಮಾಧ್ಯಮಗಳು ಜನರನ್ನು ತಮ್ಮತ್ತ ಸೆಳೆಯಲು ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ಟಾಲಿವುಡ್ ಸ್ಟಾರ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ.
ತೆಲುಗು ಸಿನಿಮಾರಂಗದ ಮೇಲೆ ಹಾಗು ಹೀರೋಯಿನ್ಸ್ ಗಳ ಮೇಲೆ ಅಸಭ್ಯಕರ ಹೇಳಿಕೆಗಳನ್ನು ಖಂಡಿಸಿ ಮೂವಿ ಆರ್ಟಿಸ್ಟ್ ಅಸೋಸಿಯೇಟ್ ನವರು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ರಾಕುಲ್ ಪ್ರೀತ್ ಸಿಂಗ್ ಅವರು,’ ಇಂತಹ ನಿರಸನ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪ್ರಜೆಗಳಿಗೆ ನಿಜ ಏನೆಂದು ತಿಳಿಯುತ್ತದೆ. ಸೆಲೆಬ್ರೆಟಿಗಳ ಮೇಲೆ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿರುವುದು ಕಾಮನ್ ಆಗಿದೆ. ಹೀರೋ ಹೀರೋಯಿನ್ ಕುರಿತು ತಮಗೆ ತಿಳಿದ ರೀತಿಯಲ್ಲಿ ಏನುಬೇಕೋ ಹಾಗೆ ವಿಷಯಗಳನ್ನು ತಿರುಚಿ ಪ್ರಸಾರ ಮಾಡಲಾಗುತ್ತಿದೆ. ಜೊತೆಗೆ ಟಿವಿ ಯ್ಯಾಂಕರ್ ಗಳು ಸೆಲೆಬ್ರೆಟಿಗಳಿಗೆ ತುಂಬಾ ನೀಚವಾಗಿ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ಇತ್ತೀಚಿಗೆ ನೋಡಿ ಬಾರೀ ಬೇಸರವಾಯಿತು.
ಈ ರೀತಿ ನಮ್ಮ ವಯಕ್ತಿಕ ವಿಚಾರಗಳಿಗೆ ತಲೆಹಾಕುವ ಅವಶ್ಯಕತೆ ಯಾವುದೇ ಮಾಧ್ಯಮದವರಿಗಿಲ್ಲ. ಈ ರೀತಿ ನಮ್ಮನ್ನು ಕೆಳ ಮಟ್ಟದ ವಿಚಾರಗಳ ಆಧಾರಲ್ಲಿ ಬಿತ್ತರಿಸಿದರೆ ನಮ್ಮ ಮನೆಯಲ್ಲಿ ಕೇಳುವ ಪ್ರಶ್ನೆಗಳಿಗೆ ನಾವೇನು ಉತ್ತರಿಸಬೇಕು ಹಾಗು ನಮ್ಮ ಮಾನ ಮರ್ಯಾದೆ ಏನಾಗಬಹುದು ಎಂದು ಮಾಧ್ಯಮಗಳು ಅರ್ಥೈಸಿಕೊಂಡು ಸುದ್ದಿ ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ