ಮುಂಬೈ : ನವೆಂಬರ್ 14ರಂದು ನಡೆಯಲಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಗೆ ಸ್ಯಾಂಡಲ್ವುಡ್ನಿಂದ ನಿರ್ದೇಶಕರೊಬ್ಬರಿಗೆ ಆಹ್ವಾನ ಬಂದಿದೆಯಂತೆ.
ಹೌದು. ನವೆಂಬರ್ 14ರಂದು ಇಟಲಿಯಲ್ಲಿ ನಡೆಯಲಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಚಿತ್ರರಂಗದಿಂದ ಕೆಲವೇ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಆಮಂತ್ರಣ ನೀಡಲಾಗಿದೆಯಂತೆ. ಆದರೆ ಇಂದ್ರಜಿತ್ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್ಪ್ ಮೂಲಕ ಬಂದಿರುವುದರಿಂದ , ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
2006ರ ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯ ಸಿನಿಮಾದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಜೊತೆ ನಟಿಸುವುದರ ಮೂಲಕ ನಟಿ ದೀಪಿಕಾ ಪಡುಕೋಣೆ ಮೊಟ್ಟಮೊದಲ ಬಾರಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.