ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಕಂಡ ಅತ್ಯದ್ಭುತ ಆಟಗಾರ್ತಿ ಮಿಥಾಲಿ ರಾಜ್. ಮಿಥಾಲಿ ಆತ್ಮಕತೆ ಸಿನಿಮಾಗುತ್ತಿದ್ದು, ಕ್ರಿಕೆಟ್ ಆಟಗಾರ್ತಿ ಪಾತ್ರ ಮಾಡುತ್ತಿರುವ ನಟಿ ಯಾರೆಂದು ಕನ್ ಫರ್ಮ್ ಆಗಿದೆ.
ಈಗಾಗಲೇ ಸೈನಾ ನೆಹ್ವಾಲ್ ಬಗ್ಗೆಯೂ ಬಾಲಿವುಡ್ ನಲ್ಲಿ ಸಿನಿಮಾವಾಗುತ್ತಿದೆ. ಇದೀಗ ಮಿಥಾಲಿ ಜೀವನಗಾಥೆ ಸಿನಿಮಾವಾಗಲಿದ್ದು, ಇದಕ್ಕೆ ‘ಶಬ್ಬಾಶ್ ಮಿಥು’ ಎಂದು ಟೈಟಲ್ ಫಿಕ್ಸ್ ಆಗಿದೆ.
ಮಿಥಾಲಿ ಬರ್ತ್ ಡೇ ದಿನದಂದು ಈ ವಿಚಾರ ಬಹಿರಂಗವಾಗಿದ್ದು, ನಟಿ ತಾಪ್ಸೀ ಪಣ್ಣು ತಾವು ಮಿಥಾಲಿ ಪಾತ್ರ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ.