ಮುಂಬೈ : ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಂಡಾಗ ಅವರ ಬಳಿ ಹೋಗಿ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಾರೆ. ಆದರೆ ಇತ್ತಿಚೆಗೆ ಬಾಲಿವುಡ್ ಖ್ಯಾತ ನಟ ರಿಶಿ ಕಪೂರ್ ಅವರು ತಮ್ಮ ಅಭಿಮಾನಿಯೊಬ್ಬರು ಸೆಲ್ಫಿ ಕೇಳಿದಾಗ ನೀಡದೆ ಅವರ ಕಣ್ಣಲ್ಲಿ ನೀರು ಹಾಕಿಸಿದ್ದಾರೆ.
ರಿಶಿ ಕಪೂರ್ ಅವರು ತಮ್ಮ ಪ್ಯಾಮಿಲಿ ಜೊತೆ ಬಾಂದ್ರಾದ ಪಾಶ್ ರೆಸ್ಟೋರೆಂಟ್ ಗೆ ಹೋಗಿದ್ದಾಗ ಮಹಿಳಾ ಅಭಿಮಾನಿಯೊಬ್ಬರು ಅವರ ಹತ್ತಿರ ಬಂದು ಸೆಲ್ಫಿ ಕೇಳಿದಾಗ ‘ನೋ’ ಎಂದು ಹೇಳಿದ್ದಕ್ಕೆ ಆ ಅಭಿಮಾನಿ ‘ನೀವು ತುಂಬಾ ರೂಡ್ ‘ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ರಿಶಿ ಕಪೂರ್ ಅವರು ‘ನಿಮಗೆ ಅರ್ಥವಾಗುವುದಿಲ್ಲ. ನೀವು ತುಂಬಾ ರೂಡ್ ಎಂದು ಹೇಳಲು ನಿಮಗೆ ತುಂಬಾ ಸುಲಭ’ ಎಂದು ಸಿಟ್ಟಿನಿಂದ ಹೇಳಿದಾಗ ಅಭಿಮಾನಿ ಕಣ್ಣೀರು ಹಾಕಿದ್ದಾರೆ. ನಂತರ ರಣಬೀರ್ ಕಪೂರ್ ಅವರು ಬಂದು ತಂದೆಯನ್ನು ಸಮಾಧಾನ ಪಡಿಸಿ ಕರೆದುಕೊಂಡು ಹೋಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ