ಚೆನ್ನೈ : ತಮಿಳು ನಟ, ನಿರ್ಮಾಪಕ ಧನುಷ್ ಅವರು ತಮ್ಮ ನಿರ್ಮಾಣದಲ್ಲಿ ಮೂಡಿಬಂದ 'ಕಾಲಾ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿ ಬರುತ್ತಿದೆ ಎಂದು ಹೇಳಿದ್ದಾರೆ. ಹಲವರಿಗೆ ಧನುಷ್ ಅವರು ಹೀಗ್ಯಾಕೆ ಹೇಳಿದ್ರು ಎಂಬ ಗೊಂದಲ ಮೂಡಿರಬಹುದು.
ಇದಕ್ಕೆ ಒಂದು ಮುಖ್ಯವಾದ ಕಾರಣವಿದೆ. ಅದೇನೆಂದರೆ ಧನುಷ್ ನಿರ್ಮಾಣದ ವಂಡರ್ಬಾಲ್ ಬ್ಯಾನರ್ ನಲ್ಲಿ ತೆರೆಗೆ ಕಂಡ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಸಿನಿಮಾ ತಮಿಳುನಾಡಿನಲ್ಲಿ ಎಲ್ಲಾ ನಗರಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮುಖ್ಯವಾಗಿ ಚೆನ್ನೈನಲ್ಲಿ ಭಾರಿ ಕಲೆಕ್ಷನ್ ಮಾಡಿದ ಐದನೇ ಅತಿ ದೊಡ್ಡ ಸಿನಿಮಾ ಎನ್ನಿಸಿಕೊಂಡಿದೆ.
ಆದರೆ ಕಾಲಾ ಚಿತ್ರದಿಂದ ರೂ.40 ಕೋಟಿವರೆಗೂ ನಷ್ಟ ಆಗಿದೆ, ಆ ನಗದನ್ನು ವಿತರಕರಿಗೆ ಧನುಷ್ ನೀಡಬೇಕು ಎಂಬ ಸುದ್ದಿ ಕೇಳಿಬಂದಿದೆ. ಆದಕಾರಣ ಧನುಷ್ ಅವರು 'ಕಾಲಾ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿ ಬರುತ್ತಿದೆ’ ಎಂದು ಹೇಳಿದ್ದಾರೆ. 'ನಿಜ ಹೇಳಬೇಕೆಂದರೆ ಕಲೆಕ್ಷನ್ ಪರವಾಗಿ ಕಾಲಾ ಯಶಸ್ಸು ಸಾಧಿಸಿದ್ದು, ವಂಡರ್ ಬಾಲ್ ಫಿಲಂಸ್ ಕಂಪೆನಿಗೆ ಒಳ್ಳೆಯ ಹೆಸರುತಂದುಕೊಟ್ಟಿದೆ. ತಮ್ಮ ಕಂಪೆನಿಗೆ ಅವಕಾಶ ನೀಡಿದ ರಜನಿಕಾಂತ್ಗೆ, ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಪ್ರೇಕ್ಷಕರಿಗೆ ಈ ಸಂದರ್ಭದಲ್ಲಿ ಕೃತಜ್ಜತೆಗಳನ್ನು ತಿಳಿಸುತ್ತಿದ್ದೇನೆ' ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ