ಮುಂಬೈ: ಮೊನ್ನೆಯಷ್ಟೇ ಇಹಲೋಕ ತ್ಯಜಿಸಿದ ಬಾಲಿವುಡ್ ದಂತಕತೆ ಶ್ರೀದೇವಿ ಮನೆಗೆ ಸಾಂತ್ವನ ಹೇಳಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಿಡೀರ್ ಭೇಟಿ ನೀಡಿದ್ದಾರೆ.
ಶ್ರೀದೇವಿ ಅಂತಿಮ ಕ್ರಿಯೆ ವೇಳೆ ಭೋಪಾಲ್ ನಲ್ಲಿ ಶೂಟಿಂಗ್ ನಲ್ಲಿದ್ದ ಕಾರಣ ಅನುಷ್ಕಾ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭೋಪಾಲ್ ನಿಂದ ಮುಂಬೈಗೆ ಬಂದಿಳಿದ ತಕ್ಷಣ ಪತಿ ಕೊಹ್ಲಿ ಜತೆ ಶ್ರೀದೇವಿ ನಿವಾಸಕ್ಕೆ ಅನುಷ್ಕಾ ತೆರಳಿದರು.
ವಿಪರ್ಯಾಸವೆಂದರೆ ನಿನ್ನೆ ಶ್ರೀದೇವಿ ಪುತ್ರಿ ಜಾಹ್ನವಿ ಜನ್ಮ ದಿನವಾಗಿತ್ತು. ಈ ಹಿನ್ನಲೆಯಲ್ಲಿ ಜಾಹ್ನವಿ ಅಮ್ಮ ಶ್ರೀದೇವಿಯನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ