ಈ ಬಾರಿಯ 2017-18ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಬಾಲಿವುಡ್ ತೀವ್ರ ನಿರುತ್ಸಾಹ ವ್ಯಕ್ತಪಡಿಸಿದೆ. ರೈತರಿಗೆ, ಗ್ರಾಮೀಣ ಜನರಿಗೆ, ಮಧ್ಯಮವರ್ಗದ ಕುಟುಂಬದ ಬಗ್ಗೆ ಹೆಚ್ಚಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಯಿತು. ಆದರೆ ಸಿನಿಮಾ ಕ್ಷೇತ್ರದ ಪ್ರಸ್ತಾಪವೇ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತವಾಗಿದೆ.
ಮನರಂಜನೆ ತೆರಿಗೆ ಬಗ್ಗೆಯಾಗಲಿ, ಅಧಿಕ ಮೌಲ್ಯದ ನೋಟು ನಿಷೇಧದಿಂದ ಹೊಡೆತ ತಿಂದ ಸಿನಿಮಾ ಕ್ಷೇತ್ರದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಖೇದಕರ. ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರದ ಬಗೆಗಿನ ಅಸಡ್ಡೆ ಇದೇ ಮೊದಲಲ್ಲ ಎಂದು, ಕಳೆದ ಕೆಲವು ವರ್ಷಗಳಿಂದ ಇದೇ ಪರಿಸ್ಥಿತಿ ಎಂಬ ಮಾತುಗಳು ಕೇಳಿಬಂದಿವೆ.
2017-18ರ ಬಜಟ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹನ್ಸಲ್ ಮೆಹತಾ ಮಾತನಾಡುತ್ತಾ, ಇದು ಸರಕಾರದ ತಪ್ಪಲ್ಲ. ಕಳೆದ 20 ವರ್ಷಗಳಿಂದ ಸಿನಿಮಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನ್ಯಾಯ ನಡೆಯುತ್ತಾ ಬಂದಿದೆ. ಸಿನಿಮಾ ಕ್ಷೇತ್ರಕ್ಕೆ ಯಾವುದೇ ಪ್ರಾಧಾನ್ಯತೆ ಇಲ್ಲದ ಈ ಬಜೆಟ್ ಬಗ್ಗೆ ನಾನೇನು ನಿರೀಕ್ಷಿಸುತ್ತಿಲ್ಲ.
ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದವರು ಸರಕಾರಕ್ಕೆ ತೆರಿಗೆ, ಮನರಂಜನಾ ತೆರಿಗೆ ಸಲ್ಲಿಸುತ್ತಿರುವಷ್ಟು ದಿನ ಅವರಿಗೆ ಬೇರೆ ವಿಷಯ ಬೇಕಿಲ್ಲ. ಯಾಕೆಂದರೆ ನಾವು ಎಲ್ಲವನ್ನು ಅಂಗೀಕರಿಸುತ್ತೇವೆ ಎಂಬ ಉದ್ದೇಶ ಅವರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನಪ್ರಿಯ ಗಾಯಕ ಕೈಲಾಶ್ ಖೇರ್ ಬಜೆಟ್ ಬಗ್ಗೆ ಮಾತನಾಡುತ್ತಾ, ಸೃಜನಾತ್ಮಕತೆ ಇರುವ ಸಿನಿಮಾ ಕ್ಷೇತ್ರವನ್ನು ಯಾರೂ ಗಂಭೀರವಾಗಿ ಪರಿಣಸುತ್ತಿಲ್ಲ. ಈ ಕ್ಷೇತ್ರದಿಂದ ಬರುವ ಆದಾಯ ಅಧಿಕ ಮೊತ್ತ ದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದ್ದರೂ ಸರಕಾರ ಕೇವಲ ಸೇವಾ ತೆರಿಗೆ ಹೆಚ್ಚಿಸುವ ಮೇಲೆ ದೃಷ್ಟಿ ಇಟ್ಟಿದೆ ಹೊರತು ನಟಿ ನಟರಿಗೆ ಬೆಂಬಲ ಕೊಡುತ್ತಿಲ್ಲ ಎಂದು ಬಜೆಟ್ ಬಗ್ಗೆ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.