Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮಗೆ ಪ್ರೈವಸಿ ಕೊಡಿ ಪ್ಲೀಸ್..ಮಾಧ್ಯಮಗಳಿಗೆ ವಿನಂತಿ

ನಮಗೆ ಪ್ರೈವಸಿ ಕೊಡಿ ಪ್ಲೀಸ್..ಮಾಧ್ಯಮಗಳಿಗೆ ವಿನಂತಿ
Mumbai , ಶನಿವಾರ, 18 ಫೆಬ್ರವರಿ 2017 (13:04 IST)
ಬಾಲಿವುಡ್ ನಟ ಟೈಗರ್ ಶ್ರಾಫ್ ಮುಂಬೈ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ. ಟೈಗರ್, ನಟಿ ದಿಶಾ ಪಟಾನಿ ಒಬ್ಬರನ್ನೊಬ್ಬರು ಬಹಳ ಕಾಲದಿಂದ ಪ್ರೇಮಿಸಿಕೊಳ್ಳುತ್ತಿದ್ದಾರೆ. ಈ ವಿಷಯವೇನು ಬಿ-ಟೌನಲ್ಲಿ ಗುಟ್ಟಾಗಿ ಉಳಿದಿಲ್ಲ. ಆದರೆ ಇಬರಿಬ್ಬರೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎನ್ನುತ್ತಿದ್ದಾರೆ. 
 
ಇನ್ನೊಂದು ಕಡೆ ಎಲ್ಲಿಗೇ ಹೋದರೂ ಇಬ್ಬರೂ ಜತೆಯಾಗಿ ಹೋಗುತ್ತಿದ್ದಾರೆ. ಅವರಿಬ್ಬರೂ ಹೊರಗೆ ಎಲ್ಲಿ ಕಾಣಿಸಿಕೊಂಡರೂ ಫೋಟೋಗ್ರಾಫರ್‌ಗಳು ಕ್ಯಾಮೆರಾಗಳಲ್ಲಿ ಬಂಧಿಸಿಕೊಳ್ಳುತ್ತಿದ್ದಾರೆ. ಇದರಿಂದ ಬೇಸರಗೊಂಡಿರುವ ಟೈಗರ್...ನಮಗೆ ಸ್ವಲ್ಪ ಪ್ರೈವಸಿ ಕೊಡಿ ಎಲ್ಲಿಗೆ ಹೋದರೂ ಫೋಟೋಗಳನ್ನು ತೆಗೆದು ರಾದ್ದಾಂತ ಮಾಡಬೇಡಿ ಎಂದು ಮುಂಬೈ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.
 
ಮಾಧ್ಯಮಗಳು ಮಾಡುತ್ತಿರುವ ಕೆಲಸವನ್ನು ಟೀಕಿಸುವ ಬದಲು, ತಮ್ಮಿಬ್ಬರ ನಡುವಿನ ಸಂಬಂಧ ಏನು ಎಂದು ಹೇಳಿಬಿಟ್ಟರೆ ಈ ತಕರಾರೇ ಇರುತ್ತಿರಲಿಲ್ಲ ಎಂದು ಬಾಲಿವುಡ್ ಮೂಲಗಳು ಮಾತನಾಡಿಕೊಳ್ಳುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರುತಿ ಹಾಸನ್ ಈತನನ್ನು ಪ್ರೇಮಿಸುತ್ತಿದ್ದಾರಾ?