ಮುಂಬೈ : ಮೂವರು ಮಹಿಳೆಯರು ನಿರ್ದೇಶಕ ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಹಿನ್ನಲೆಯಲ್ಲಿ ಇದೀಗ ಸಾಜಿದ್ ಖಾನ್ ತಾವು ನಿರ್ದೇಶನ ಮಾಡುತ್ತಿರುವ ಹೌಸ್ ಫುಲ್ 4 ಚಿತ್ರದಿಂದ ಹಿಂದೆ ಸರಿದಿದ್ದಾರೆ.
ರಚೇಲ್ ವೈಟ್, ಉಪ ನಿರ್ದೇಶಕಿ ಸಲೋನಿ ಚೋಪ್ರಾ ಮತ್ತು ಪತ್ರಕರ್ತೆ ಕರೀಷ್ಮಾ ಉಪಾಧ್ಯಾಯ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದಕ್ಕೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಸಹ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ಈ ಬಗ್ಗೆ ಬೇಸರಗೊಂಡ ನಿರ್ದೇಶಕ ಸಾಜಿದ್ ಖಾನ್ ಟ್ವೀಟರ್ ನಲ್ಲಿ ತಮ್ಮ ಮೇಲೆ ಕಿರುಕುಳ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಾವು ಮುಂಬರುವ ಬಹು ನಿರೀಕ್ಷಿತ ಚಿತ್ರ ಹೌಸ್ಫುಲ್- 4ರ ನಿರ್ದೇಶನದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ.
ಅಲ್ಲದೇ ತಾವು ಸತ್ಯ ಪ್ರೂವ್ ಮಾಡುವ ತನಕ ಮಾಧ್ಯಮದವರು ಯಾವುದೇ ತೀರ್ಪು ನೀಡಬಾರದು. ಸತ್ಯ ಹೊರ ಬರುವವರೆಗೂ ವೇಟ್ ಮಾಡಿ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.