ಚೆನ್ನೈ : ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ತಾರೆಯರ ಕಾಲೆಯುವಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅದೇರೀತಿ ನಟಿ ತಾಪ್ಸಿ ಪನ್ನು ಅವರಿಗೆ ಕೂಡ ಇತ್ತೀಚೆಗೆ ನೇಟಿಜನ್ ಒಬ್ಬರು ಕಾಮೆಂಟ್ ಮಾಡಿದ್ದು, ಅದಕ್ಕೆ ತಾಪ್ಸಿ ಅವರು ಖಡಕ್ ಉತ್ತರ ನೀಡಿದ್ದಾರೆ.
ತಾಪ್ಸಿ ಪನ್ನು ಅವರು ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿರುವ "ಮನ್ಮರ್ಜಿಯಾ" ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಚಿತ್ರಿಕರಣದ ಸಮಯದಲ್ಲಿ ತೆಗೆದ ತಾಪ್ಸಿ ಹಾಗು ಅನುರಾಗ್ ಅವರು ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಅದನ್ನು ನೋಡಿದ ಹರ್ಜೋತ್ ಸಿಂಗ್ ಎಂಬ ನೇಟಿಜನ್ ಒಬ್ಬರು,’ಇಷ್ಟಕ್ಕೂ ನಿನ್ನನ್ನು ಹೀರೋಯಿನ್ ಮಾಡಿದ್ಯಾರು? ನೀನು ನೋಡಲು ಆವರೇಜ್ ಆಗಿರ್ತೀಯ’ ಎಂದು ತಾಪ್ಸಿ ಅವರಿಗೆ ಕಾಮೆಂಟ್ ಮಾಡಿದ್ದಾರೆ. ಈ ಟ್ವೀಟ್ಗೆ ತಾಪ್ಸಿ ಅವರು,’ ಬಹುಶಃ ನನ್ನ ಅಭಿನಯ ನೋಡಿ ಅವಕಾಶ ಕೊಟ್ಟಿರುತ್ತಾರೆ. ಆವರೇಜ್ ಆಗಿ ಇರುವುದು ತಪ್ಪೇನು ಇಲ್ಲ ಅಲ್ಲವೇ? ಜಗತ್ತಿನಲ್ಲಿ "ಆವರೇಜ್" ಎಂಬುದು ಅತಿದೊಡ್ಡ ಕ್ಯಾಟಗರಿ ಎಂದು ಖಡಕ್ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ