ಚೆನ್ನೈ : ಕಾವೇರಿ ನದಿ ನೀರು ನಿರ್ವಹಣೆ ಮಂಡಳಿಯನ್ನು ಕೇಂದ್ರ ಸರಕಾರ ರಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ನಡೆಸುತ್ತಿದ್ದ ಪ್ರತಿಭಟನೆಗೆ ತಮಿಳು ಚಿತ್ರರಂಗವು ಕೂಡ ಕೈಜೋಡಿಸಿತ್ತು. ಆದರೆ ತಮಿಳು ನಟರೊಬ್ಬರು ಮಾತ್ರ ಕನ್ನಡಿಗರಿಗೆ ಬೆಂಬಲ ಸೂಚಿಸಿದ್ದಾರೆ.
ತಮಿಳು ನಟ ಸಿಂಬು ಅವರು ಈ ಪ್ರತಿಭಟನೆಯಲ್ಲಿ ಕನ್ನಡಿಗರ ಪರವಾಗಿ ನಿಂತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,’ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲ ಸ್ವಾಮಿ, ಅವರಿಗೆ ಇಲ್ಲ ಎಂದ್ಮೇಲೆ ನಮಗೆಲ್ಲಿಂದ ಕೊಡ್ಬೇಕು’ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಇಡೀ ತಮಿಳುನಾಡು ಕನ್ನಡಿಗರ ಮೇಲೆ ಹರಿಹಾಯ್ದರೆ ಸಿಂಬು ಅವರು ಮಾತ್ರ ಕನ್ನಡಿಗರ ಪರ ನ್ಯಾಯಯುತವಾಗಿ ಮಾತನಾಡಿದ್ದು ಕನ್ನಡಿಗರಿಗೆ ಸಂತೋಷ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ