Webdunia - Bharat's app for daily news and videos

Install App

ಆ ಗಾಸಿಪ್‌ನಿಂದ ಮನಸ್ಸಿಗೆ ತುಂಬಾ ನೋವಾಯಿತು

Webdunia
ಮಂಗಳವಾರ, 10 ಜನವರಿ 2017 (12:30 IST)
ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಬೇಜಾರಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಅವರ ಮೇಲಿನ ಗಾಸಿಪ್ ಸುದ್ದಿ. ಶ್ರದ್ಧಾ ಮತ್ತು ಫರ್ಹಾನ್ ಅಕ್ತರ್ ಇಬ್ಬರೂ ಪ್ರೇಮಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬೆನ್ನಿಗೆ ಇನ್ನೊಂದು ಗಾಸಿಪ್ ಹರಿದಾಡಿದೆ. 
 
ಶ್ರದ್ಧಾ ಗಂಟುಮೂಟೆ ಕಟ್ಟಿಕೊಂಡು ಫರ್ಹಾನ್ ಮನೆಗೆ ಶಿಫ್ಟ್ ಆಗಿದ್ದಾರೆ ಎಂಬುದು. ಈ ವಿಷಯದ ಬಗ್ಗೆ ಆಕೆಯ ತಂದೆ ಶಕ್ತಿ ಕಪೂರ್...ಆಕೆಯನ್ನು ಮನೆಗೆ ಕರೆದೊಯ್ದರೆಂದೂ ಸುದ್ದಿ ಚಾಲ್ತಿಯಲ್ಲಿತ್ತು. ತನ್ನ ಮೇಲಿನ ಈ ಗಾಸಿಪ್‌ಗೆ ಶ್ರದ್ಧಾ ಕಪೂರ್ ತುಂಬಾ ನೋವುಂಡಿದ್ದಾರಂತೆ.
 
"ಸಾಮಾನ್ಯವಾಗಿ ನನ್ನ ಸಹ ನಟರೊಂದಿಗೆ ಸಂಬಂಧ ಇದೆ ಎಂಬ ಮಾತುಗಳನ್ನು ನಾನು ಅಷ್ಟಾಗಿ ತಲೆಗೆ ಹಾಕಿಕೊಳ್ಳಲ್ಲ. ಅದರ ಬಗ್ಗೆ ವ್ಯಥೆನೂ ಪಡಲ್ಲ. ಆದರೆ ಈ ಬಾರಿ ವದಂತಿಯಲ್ಲಿ ನನ್ನ ಕುಟುಂಬವನ್ನೂ ಎಳೆದು ತಂದಿದ್ದಾರೆ. ಈ ವಿಷಯವೇ ನನ್ನ ನೋವಿಗೆ ಕಾರಣವಾಗಿರುವುದು. ಕೆಲವರು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳದೆ ಈ ರೀತಿಯ ಗಾಸಿಪ್ ಸೃಷ್ಟಿಸುತ್ತಿದ್ದಾರೆ. ವಾಸ್ತವ ಏನೂಂತ ಅವರು ತಿಳಿದುಕೊಳ್ಳಬೇಕು. ಊಹಿಸಿಕೊಂಡು ಈ ರೀತಿಯ ಕಟ್ಟಕಥೆಗಳನ್ನು ಬರೆಯಬಾರದು" ಎಂದು ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ ಶ್ರದ್ಧಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments