ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಜತೆಗೆ ಅನುಷ್ಕಾ ಶರ್ಮಾ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗಿದ್ದರೂ ಅವರ ಜತೆಗೆ ಹೆಗಲಿಗೆ ಕೈ ಹಾಕಿ ಮಾತನಾಡುವಷ್ಟು ಸಲಿಗೆ ಇಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
ಅದಕ್ಕೆ ಕಾರಣ ಅವರ ಬಗ್ಗೆ ಅನುಷ್ಕಾಗೆ ವಿಪರೀತ ಗೌರವವಿದೆಯಂತೆ. ಹೀಗಾಗಿಯೇ ಅವರ ಜತೆ ಸ್ನೇಹಿತನ ಜತೆ ಇರುವ ಸಲಿಗೆಗಿಂತ ಗೌರವವೇ ಜಾಸ್ತಿ ಎಂದಿದ್ದಾರೆ. ರಬ್ ನೇ ಬನಾ ದಿ ಜೋಡಿ, ಜಬ್ ತಕ್ ಹೇ ಜವಾನ್ ಚಿತ್ರಗಳಲ್ಲಿ ಯಶ್ ಚೋಪ್ರಾ ಬ್ಯಾನರ್ ಅವರನ್ನು ತೆರೆಗೆ ಪರಿಚಯಿಸಿತ್ತು.
ಇದೀಗ ಇಬ್ಬರೂ ಇಮ್ತಿಯಾಜ್ ಆಲಿ ಅವರ ನಿರ್ದೇಶನ ದಿ ರಿಂಗ್ ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. “ನಾವಿಬ್ಬರೂ 8 ವರ್ಷಗಳಿಂದ ಜತೆಯಾಗಿ ಕೆಲಸ ಮಾಡಿದ್ದೇವೆ. ಹಾಗೆಂದು ರಣಬೀರ್ ಕಪೂರ್ ಜತೆ ಮಾತನಾಡುವ ಹಾಗೆ ಶಾರುಖ್ ಜತ ಮಾತನಾಡಲಾರೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ