Webdunia - Bharat's app for daily news and videos

Install App

ನಟ ಶಾರುಖ್ ಖಾನ್‌ಗೆ ಮತ್ತೆ ಶಸ್ತ್ರಚಿಕಿತ್ಸೆ?

Webdunia
ಶುಕ್ರವಾರ, 9 ಡಿಸೆಂಬರ್ 2016 (10:39 IST)
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮಂಡಿನೋವಿನಿಂದ ತೀವ್ರ ನೋವನುಭವಿಸುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಎಡ ಮಂಡಿನೋವಿನಿಂದ ಬಳಲುತ್ತಿರುವ ಶಾರುಖ್‍ಗೆ 2015ರಲ್ಲಿ ಆರ್ಥೋಪೆಡಿಕ್ ಸರ್ಜರಿಯನ್ನು ಡಾ.ಸಂಜಯ್ ದೇಸಾಯಿ ಮಾಡಿದ್ದರು.
 
ಆಪರೇಷನ್ ಆದ ಮೇಲೆ ಮಂಡಿಗೆ ಕ್ಯಾಪ್ ಹಾಕಿಕೊಳ್ಳಬೇಕೆಂದೂ ವೈದ್ಯರು ಸಲಹೆ ಕೊಟ್ಟರೂ ಶಾರುಖ್ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆಗಾಗ ಬಳಸುತ್ತಿದ್ದರಂತೆ. ಆಕ್ಷನ್ ಸನ್ನಿವೇಶಗಳು ಮಾಡಬಾರದು ಎಂದು ಎಚ್ಚರಿಸಿದ್ದರೂ ಕೇಳುತ್ತಿರಲಿಲ್ಲವಂತೆ. 
 
ಈಗ ರಯೀಸ್ ಚಿತ್ರದ ಆಕ್ಷನ್ ಸನ್ನಿವೇಶಗಳಲ್ಲಿ ಶಾರುಖ್ ಅಭಿನಯಿಸುತ್ತಿದ್ದಾರೆ. ಮತ್ತೆ ನೋವು ಶುರುವಾಗಿದೆ. ಅವರ ಮುಂದಿನ ಚಿತ್ರ ದಿ ರಿಂಗ್ ಶೂಟಿಂಗ್ ಮುಗಿಸಿಕೊಡಬೇಕಾಗಿದೆ. ಹಾಗಾಗಿ ಆಪರೇಷನ್ ಈಗಲೇ ಸಾಧ್ಯವಿಲ್ಲ. ಹತ್ತು ತಿಂಗಳ ಬಳಿಕ ಮತ್ತೆ ಸರ್ಜರಿ ಮಾಡಬೇಕೆಂದು ಡಾ.ದೇಸಾಯಿ ಹೇಳಿದ್ದಾರೆ. 
 
ಸಾಧ್ಯವಾದಷ್ಟು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಐದು ತಿಂಗಳ ಹಿಂದೆ ತರಚು ಗಾಯಗಳಾಗಿದ್ದ ಕಾರಣ ಇಂಜೆಕ್ಷನ್, ನೋವು ನಿವಾರಕಗಳ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಈಗ ಅವರಿಗೆ ಮತ್ತೆ ನೋವು ಶುರುವಾಗಿದ್ದು, ಅದನ್ನು ಸರಿಪಡಿಸಲು ತುಂಬಾ ಸಮಯ ಬೇಕಾಗುತ್ತದೆ ಎನ್ನುತ್ತಿದ್ದಾರೆ ವೈದ್ಯರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments