ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಬೆಡಗಿ ಪ್ರಿಯಾಂಕಾ ಚೋಪ್ರಾ ಜೊತೆಯಾಗಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನುತ್ತಿವೆ ಮೂಲಗಳು.
ಉರ್ದು ಸಾಹಿತಿ ಸಾಹಿರ್ ಲುಧಿಯಾನ್ವಿ ಜೀವನ ಕಥೆ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲು ಭನ್ಸಾಲಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಶಾರುಖ್ಗೆ ಕಥೆಯನ್ನೂ ಹೇಳಿದರಂತೆ. ಶಾರುಖ್ಗೆ ಕಥೆ ಇಷ್ಟವಾಗಿದ್ದು ನಟಿಸುವುದಾಗಿ ಹೇಳಿದ್ದಾರಂತೆ.
ಈ ಚಿತ್ರಕ್ಕೆ ಪ್ರಿಯಾಂಕಾ ಅವರನ್ನು ನಾಯಕಿ ಎಂದು ಭನ್ಸಾಲಿ ನಿರ್ಧರಿಸಿರುವುದು ಇನ್ನೊಂದು ವಿಶೇಷ. ಶಾರುಖ್ ಮುಖ್ಯಭೂಮಿಕೆಯಲ್ಲಿರುವ ರಯೀಸ್ ಚಿತ್ರ ಜನವರಿ 25ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಅಮೆರಿಕಾ ಟಿವಿ ಕಾರ್ಯಕ್ರಮ ಕ್ವಾಂಟಿಕೊ, ಹಾಲಿವುಡ್ ಚಿತ್ರ ಬೇವಾಚ್ನಲ್ಲಿ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.