ಮುಂಬೈ: ತಮ್ಮ ನಿರ್ದೇಶನದ ಟ್ಯೂಬ್ ಲೈಟ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಜತೆಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಗಳೆಲ್ಲಾ ನಿಜವಲ್ಲ ಎಂದು ಕಬೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರ ಜತೆಗೆ ವಿಶೇಷ ಪಾತ್ರದಲ್ಲಿ ಅಭಿನಯಿಸಲು ಶಾರುಖ್ ರನ್ನು ಸಂಪರ್ಕಿಸಲಾಗಿತ್ತು ಎಂದು ಸುದ್ದಿ ಹಬ್ಬಿತ್ತು. ಇದೀಗ ಸ್ವತಃ ನಿರ್ದೇಶಕರೇ ಅದನ್ನು ತಳ್ಳಿ ಹಾಕಿದ್ದಾರೆ.
ಆದರೆ ಶಾರುಖ್ ಖಂಡಿತಾ ನಟಿಸಲ್ಲ ಎನ್ನುವ ಹಾಗಿಲ್ಲ. ಸದ್ಯಕ್ಕೆ ಅಂತಹ ಯೋಜನೆಗಳಿಲ್ಲ. ಇದ್ದರೆ ಖಂಡಿತಾ ತಿಳಿಸುತ್ತೇನೆ ಎಂದಿದ್ದಾರೆ. ಟ್ಯೂಬ್ ಲೈಟ್ ಚಿತ್ರದಲ್ಲಿ ಚೀನಾ ಕಲಾವಿದ ಝು ಝು ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ