ಸಾಮಾನ್ಯವಾಗಿ ಖ್ಯಾತ ನಟರ ಮಕ್ಕಳನ್ನ ಕಂಡಾಗ ನಟನೆ ಅವರ ರಕ್ತದಲ್ಲಿಯೇ ಇದೆ ಎಂದು ಹೇಳುವುದುಂಟು. ಈ ಮಾತು ಶಾರೂಖ್ ಪುತ್ರಿ ಸುಹಾನಾ ವಿಷಯಲ್ಲಿ ಸತ್ಯವಾಗಿದೆ. ನನ್ನ ಮಗಳು ಸದ್ಯದಲ್ಲೇ ಬಾಲಿವುಡ್ ಎಂಟ್ರಿಕೊಡಲಿದ್ದಾರೆ ಎಂದು ಇತ್ತೀಚೆಗೆ ಶಾರೂಖ್ ಹೇಳಿದ್ದರು. ಶಾರೂಖ್ ಯಾಕೆ ಆ ಮಾತನ್ನ ಹೇಳಿದ್ದರು ಎಂಬುದು ಇಲ್ಲಿ ತಿಳಿಯುತ್ತಿದೆ.
ಶಾರೂಖ್ ಪುತ್ರಿ ಸುಹಾನಾ ಸ್ಕೂಲ್ ಡ್ರಾಮಾದಲ್ಲಿ ಸಿಂಡ್ರೆಲಾ ಪಾತ್ರ ಮಾಡಿದ್ದು ಸ್ಟೇಜ್ ಅಲ್ಲಾಡಿಸಿದ್ದಾಳೆ. ಸುಹಾನಾಳ ವಿಡಿಯೋ ವೈರಲ್ ಆಗಿದೆ.