ಒಮ್ಮೊಮ್ಮೆ ಅಭಿಮಾನಿಗಳ ಅತಿರೇಕಕ್ಕೆ ತಾರೆಗಳಿಗೆ ಏನು ಹೇಳಬೇಕೆಂದೇ ಗೊತ್ತಾಗುವುದಿಲ್ಲ. ಅವರ ಅಭಿಮಾನ ಒಂದು ಸೆಲ್ಫಿಗೋ, ಹಸ್ತಾಕ್ಷರಕ್ಕೋ ಸೀಮಿತವಾಗಿದ್ದರೆ ಪರ್ವಾಗಿಲ್ಲ. ಆದರೆ ಅದು ಮೀರಿ ವರ್ತಿಸಿದರೆ ಯಾರಿಗೇ ಆಗಲಿ ಇರಿಸುಮುರಿಸು ತಪ್ಪಿದ್ದಲ್ಲ.
ಟಾಲಿವುಡ್ ನಟಿಯೊಬ್ಬರಿಗೆ ಅಭಿಮಾನಿಯೊಬ್ಬನಿಂದ ಕಹಿ ಘಟನೆಯೊಂದು ಎದುರಾಗಿದೆ. ಅಭಿಮಾನಿಯ ಹುಚ್ಚಾಟಕ್ಕೆ ನಟಿ ಸೀರತ್ ಕಪೂರ್ ಬೇಸರಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬ ಆಕೆಯ ಮೇಲಿನ ಪ್ರೀತಿಗೆ ’ಎಸ್’ ಆಕಾರದಲ್ಲಿ ತನ್ನ ಕೈಮೇಲೆ ಚಾಕುವಿನಲ್ಲಿ ಬರೆದುಕೊಂಡಿದ್ದಾನೆ.
ಇದನ್ನು ಟ್ವೀಟ್ ಮಾಡಿ ಸೀರತ್ಗೆ ತಿಳಿಸಿದ್ದಾನೆ ಕೂಡ. ಇದನ್ನು ನೋಡಿದ ಕೂಡಲೆ ತನಗೆ ಮಾತು ಬರಲಿಲ್ಲ ಎಂದು ಸೀರತ್ ಭಾವುಕರಾಗಿದ್ದು, ಟ್ವಿಟ್ಟರ್ನಲ್ಲೇ ಉತ್ತರ ಕೊಟ್ಟಿದ್ದಾ. ಮೊದಲು ನಿಮ್ಮನ್ನು ನೀವು ಪ್ರೀತಿಸಿ ಎಂದು ಹೇಳಿದ್ದಾರೆ. ಜೀವನ ತುಂಬಾ ಬೆಲೆಬಾಳುವಂತದ್ದು. ನೀವು ಅಷ್ಟೆ. ಇನ್ಯಾರಿಗಾಗಿಯೋ ನಿಮಗೆ ನೀವು ಹಾನಿ ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೇ ಇನ್ನೊಬ್ಬ ಬೆಡಗಿ ರಾಕುಲ್ ಪ್ರೀತ್ ರೀಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.