Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಣವೀರ್ ಸಿಂಗ್ ಜೊತೆ ಮುನಿಸಿಕೊಂಡಿದ್ದಾರಾ ಸಂಜಯ್ ಲೀಲಾ ಬನ್ಸಾಲಿ?

ರಣವೀರ್ ಸಿಂಗ್ ಜೊತೆ ಮುನಿಸಿಕೊಂಡಿದ್ದಾರಾ ಸಂಜಯ್ ಲೀಲಾ ಬನ್ಸಾಲಿ?
, ಶುಕ್ರವಾರ, 19 ಆಗಸ್ಟ್ 2016 (12:28 IST)
ರಣವೀರ್ ಸಿಂಗ್ ಹಾಗೂ ಸಂಜಯ್ ಲೀಲಾ ಬನ್ಸಾಲಿ ಅವರ ನಡುವಿನ ಸಂಬಂಧ ಎಷ್ಟು ಗಟ್ಟಿಯದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಸಂಜಯ್ ಲೀಲಾ ಬನ್ಸಾಲಿ ಅವರ ಈ ಹಿಂದಿನ ಎರಡು ಸಿನಿಮಾಗಳಾದ ಭಾಜೀರಾವ್ ಮಸ್ತಾನಿ ಹಾಗೂ ರಾಮ್ ಲೀಲಾ ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕೆಲಸ ಮಾಡಿದ್ದರು.ಇದೀಗ ಪದ್ಮಾವತಿ ಸಿನಿಮಾದಲ್ಲಿ ಈ ಜೋಡಿ ಮತ್ತೆ ಜೊತೆಯಾಗುತ್ತಿದೆ ಅಂತಾ ಹೇಳಲಾಗುತ್ತಿದೆ. ಆದ್ರೆ ಹೀಗಿರುವಾಗಲೇ ಇಬ್ಬರು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
     
ಅಯ್ಯೋ ಬನ್ಸಾಲಿ ಹಾಗೂ ರಣವೀರ್ ಸಿಂಗ್ ನಡುವೆ ಎಲ್ಲಾನೂ ಚೆನ್ನಾಗಿತ್ತಲ್ವಾ ಇವರ್ಯಾಕೆ ಮುನಿಸಿಕೊಂಡ್ರು  ಅಂತಾ ಅಂದುಕೊಳ್ಳಬೇಡಿ. ಅಂದ್ಹಾಗೆ ರಣವೀರ್ ಸಿಂಗ್ ಹಾಗೂ ಬನ್ಸಾಲಿ ಪರಸ್ಪರ ಮುನಿಸಿಕೊಳ್ಳೋದಕ್ಕೆ ಕಾರಣ ಶಾಹೀದ್ ಕಪೂರ್ ಅಂತೆ. ಅಂದ್ಹಾಗೆ ಪದ್ಮಾವತಿ ಸಿನಿಮಾದಲ್ಲಿ  ರಣವೀರ್ ಸಿಂಗ್ ಅವರು ಅಲಾವುದ್ದೀನ್ ಖಿಲ್ಜಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರದ್ದು ನೆಗೆಟೀವ್ ರೋಲ್ ಅಂತೆ. ಇನ್ನು ಇದೇ ಸಿನಿಮಾದಲ್ಲಿ ಶಾಹೀದ್ ಕಪೂರ್ ಅವರು ದೀಪಿಕಾ ಪಡುಕೋಣೆ ಅವರ ಪತಿಯ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ಶಾಹೀದ್ ಅವರಿಗೆ ಉತ್ತಮ ಪಾತ್ರವನ್ನು ನೀಡಿ ನನಗೆ ನೆಗೆಟೀವ್ ರೋಲ್ ನೀಡಿದ್ದಾರೆ ಅನ್ನೋದು ರಣವೀರ್ ಸಿಂಗ್ ಅವರ ಬೇಸರಕ್ಕೆ ಕಾರಣವಂತೆ.
 
ಆದ್ರೆ ಬನ್ಸಾಲಿ ಅವರು ಮಾತ್ರ ನಾನು ರಣವೀರ್ ಅವ್ರಿಗೆ ಈ ಪಾತ್ರವನ್ನು ನೀಡಿರೋದ ಅವರ ಕರಿಯರ್ ಗೆ ಒಳಿತಾಗಲಿ ಅಂತಾನೇ. ಅಲ್ಲದೇ ಅವರಿಗಾಗಿಯೇ ಸಿನಿಮಾದಲ್ಲಿ ಸ್ಪೆಷಲ್ ಸೀನ್ ಹಾಗೂ ಡೈಲಾಗ್ ಗಳನ್ನು ರೆಡಿ ಮಾಡಿದ್ದೇನೆ.ಆದ್ರೆ ರಣವೀರ್ ಸಿಂಗ್ ಅವರು ಅದನ್ನು ಅರ್ಥಮಾಡಿಕೊಳ್ಳದೇ ಮುನಿಸಿಕೊಂಡಿದ್ದಾರೆ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಬ್ಬಾಂಗ್ 3 ಚಿತ್ರದಲ್ಲಿ ಸೋನಾಕ್ಷಿ ನಟಿಸುವುದು ಫೈನಲ್ ಆಗಿಲ್ಲ: ಅರ್ಬಾಜ್ ಖಾನ್