ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಆಪ್ತರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಇಂತಿಪ್ಪ ಸಲ್ಮಾನ್ ತನ್ನ ಬಾಡಿಗಾರ್ಡ್ ಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಅದಕ್ಕೊಂದು ಕಾರಣವೂ ಇದೆ.
ಸಲ್ಮಾನ್ ಮತ್ತು ಕತ್ರಿನಾ ಸದ್ಯ ದುಬೈನಲ್ಲಿ ಟೈಗರ್ ಜಿಂದಾ ಹೈ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಅವರ ಜತೆಗೆ ಅವರ ಭದ್ರತಾ ಸಿಬ್ಬಂದಿಗಳೂ ದುಬೈಗೆ ಬಂದಿಳಿದಿದ್ದಾರೆ. ಆದರೆ ಈ ಭದ್ರತಾ ಸಿಬ್ಬಂದಿಗಳ ಮೇಲೆ ಚಿತ್ರ ತಂಡಕ್ಕೆ ಅಸಮಾಧಾನವಿದೆ.
ಇವರೆಲ್ಲಾ ಚಿತ್ರದ ಸೆಟ್ ನಲ್ಲಿ ನಡೆಯುವ ಗುಟ್ಟುಗಳ ಬಗ್ಗೆ ಪಬ್ಲಿಕ್ ಮಾಡುತ್ತಾರೆ ಎಂಬುದು ಚಿತ್ರತಂಡದ ಅಳಲು. ಅದಕ್ಕೆ ಸಲ್ಮಾನ್ ಒಂದು ಉಪಾಯ ಮಾಡಿದರು. ಇವರಿಗೆಲ್ಲಾ ಒಂದು ಷರತ್ತು ವಿಧಿಸಿದ್ದಾರೆ.
ಚಿತ್ರದ ಬಗ್ಗೆ ಗುಟ್ಟು ಬಿಡದಿದ್ದರೆ, ಚಿತ್ರೀಕರಣ ಮುಗಿದ ಮೇಲೆ ಶಾಪಿಂಗ್ ಮತ್ತು ಹಾಲಿಡೇ ಟ್ರಿಪ್ ಗೆ ಕಳುಹಿಸುವುದಾಗಿ ಆಫರ್ ಕೊಟ್ಟಿದ್ದಾರೆ. ಇದರೊಂದಿಗೆ ಚಿತ್ರತಂಡದ ಸಮಸ್ಯೆಗೆ ಪರಿಹಾರವೂ ಆಯ್ತು, ಬಾಡಿ ಗಾರ್ಡ್ ಗಳಿಗೆ ಭರ್ಜರಿ ಗಿಫ್ಟೂ ಸಿಕ್ಕಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ