ಸಲ್ಮಾನ್ ಖಾನ್ ಅಂದ್ರೆ ಅಭಿಮಾನಿಗಳು ಮಾತ್ರವಲ್ಲ. ಅನೇಕ ಸಿನಿಮಾ ತಾರೆಯರಿಗೆ ಅಚ್ಚುಮೆಚ್ಚಿನ ನಟ. ಸಲ್ಲು ಮನೆಯಲ್ಲಿ ಏನಾದ್ರೂ ಶುಭ ಸಮಾರಂಭ, ಪಾರ್ಟಿಗಳು ನಡೆಯುತ್ತವೆ ಅಂದ್ರೆ ಅಲ್ಲಿ ಸಿನಿಮಾ ತಾರೆಯರ ದಂಡೇ ಇರುತ್ತೆ.ಅದರಲ್ಲೂ ಸಲ್ಲು ಗೆಳೆಯರಿಗೆ ಭರ್ಜರಿ ಆತಿಥ್ಯ ಇರುತ್ತೆ.ಆದ್ರೆ ಈಗ ಸಲ್ಲು ಗೆಳೆಯರಿಗೆ ಅವರನ್ನು ಭೇಟಿ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ.
ಅರೇ!ಸಲ್ಲು ಯಾಕೆ ಅವರ ಗೆಳೆಯರನ್ನು ಭೇಟಿ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಯೋಚಿಸುತ್ತಿದ್ದೀರಾ. ಅದಕ್ಕೆ ಕಾರಣ ಸಲ್ಲು ಅವರ ಗೆಳತಿ ಲುಲಿಯಾ.ಲುಲಿಯಾ ಸಲ್ಲು ಸದ್ಯ ವಾಸಿಸುತ್ತಿರುವ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟೆಮೆಂಟ್ ಗೆ ಸಲ್ಲು ಅವರ ಯಾವ ಗೆಳೆಯರನ್ನು ಬರೋದಕ್ಕೆ ಬಿಡುತ್ತಿಲ್ಲವಂತೆ. ಸಂಗೀತಾ ಬಿಜಲಾನಿಯಿಂದ ಹಿಡಿದು ಡೈಸಿ ಶಾವರೆಗೂ ಯಾರನ್ನು ಕೂಡ ಸಲ್ಲು ಮನೆಗೆ ಬರೋದಕ್ಕೆ ಲುಲಿಯಾ ಬಿಡುತ್ತಿಲ್ಲವಂತೆ. ಸಲ್ಮಾನ್ ಖಾನ್ ಅವರು ಲುಲಿಯಾ ತುಂಬಾನೇ ಹಚ್ಚಿಕೊಂಡಿರೋದರಿಂದ ಅವರು ಯಾರನ್ನು ಬರೋದಕ್ಕೆ ಬಿಡೋದಿಲ್ಲವಂತೆ.ಅದಲ್ಲದೇ ರಾತ್ರಿ ವೇಳೆಗೆ ಸಲ್ಲು ಮನೆಗೆ ಯಾರಿಗೂ ನೋ ಎಂಟ್ರಿಯಂತೆ.
ಅದರಲ್ಲೂ ಹೆಣ್ಣುಮಕ್ಕಳು ಸಲ್ಲು ಮನೆಗೆ ಬರೋದು ಲುಲಿಯಾ ಅವರಿಗೆ ಸ್ವಲ್ಪಾನೂ ಇಷ್ಟವಿಲ್ಲವಂತೆ.ಕೇವಲ ಪಾರ್ಟಿ ಹಾಗೂ ಯಾವುದಾದರೂ ಶುಭ ಸಮಾರಂಭಗಳಿದ್ರೆ ಮಾತ್ರ ಸಲ್ಲು ಮನೆಗೆ ಬರೋದಕ್ಕೆ ಲುಲಿಯಾ ಸದ್ಯ ಪರ್ಮಿಷನ್ ನೀಡಿದ್ದಾರಂತೆ.ಈಗ್ಲೇ ಲುಲಿಯಾ ಈ ರೀತಿ ವರ್ತಿಸಿದ್ರೆ ಮದುವೆಯಾದ ಮೇಲೆ ಯಾವ ರೀತಿ ಇರುತ್ತಾರೋ ಅಂತಾ ಬಾಲಿವುಡ್ ಮಂದಿ ಮೂಗಿನ ಮೇಲೆ ಬೆರಳಿಡುತ್ತಿದ್ದಾರಂತೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.